ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ ಪ್ರಯುಕ್ತ ಅ.21 ಮಂಗಳವಾರ ರಾತ್ರಿ 7 ಗಂಟೆಯಿಂದ ತುಳಸೀ ಪೂಜೆ, ಬಲೀಂದ್ರ ಪೂಜೆ, ಗೋಪೂಜೆ ನಡೆಯಲಿದೆ.
ಅ.22 ಬುಧವಾರ ಬೆಳಿಗ್ಗೆ 8.ರಿಂದ ಕೋಟಿ ಚೆನ್ನಯ್ಯ ಗರಡಿಯಲ್ಲಿ
ತಂಬಿಲ ಸೇವೆ 9 ರಿಂದ ದೇಗುಲದ ಎದುರು ಇರುವ ದೈವ ಸಾನಿಧ್ಯಗಳಲ್ಲಿ ತಂಬಿಲ ಸೇವೆ, ಗರಡಿ ಬೈಲು ಮೂಲಸ್ಥಾನ ಶ್ರೀ ಉಳ್ಳಾಕುಲು ಶ್ರೀ ಕಾಚು ಕುಜುoಬ ದೈವಸ್ಥಾನದಲ್ಲಿ ಬಲಿಂದ್ರಪೂಜೆ, 11ಗಂಟೆಗೆ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ ಎಲ್ಲಾ ಕಾರ್ಯಕ್ರಮಗಳೀಗೂ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ತಿಳಿಸಿರುತ್ತಾರೆ.















