ಐಚಿ–ನಗೋಯಾ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.ಕೂಟದ ಎರಡನೇ ನಾಲ್ಕು ಪದಕ ಗಳಿಸಿದೆ. ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ಭಾರತದ ಹಿಮಾಂಶು ಧಿಲ್ಲೋನ್ ಬೆಳ್ಳಿ ಹಾಗೂ ರುದ್ರಾಂಕ್ಷ್ ಪಾಟೀಲ್ ಕಂಚಿನ ಪದಕ ಗೆದ್ದಿದ್ದಾರೆ. ಚೀನಾದ ಶೆಂಗ್ ಲಿಹಾವೊ ಚಿನ್ನದ ಪದಕ ತಮ್ಮದಾಗಿಸಿಕೊಂಡರು.ಇದಕ್ಕೂ ಮೊದಲು
ನಡೆದ ಪುರುಷರ 10 ಮೀಟರ್ ಏರ್ ರೈಫಲ್ ಗುಂಪು ಸ್ಪರ್ಧೆ ವಿಭಾಗದಲ್ಲಿ ರುದ್ರಾಂಕ್ಷ್ ಪಾಟೀಲ್, ಪಾರ್ಥ್ ಮಾನೆ ಮತ್ತು ಹಿಮಾಂಶು ಧಿಲ್ಲೋನ್ ಅವರನ್ನೊಳಗೊಂಡ ಭಾರತ ತಂಡವು ಬೆಳ್ಳಿ ಪದಕ ಗೆದ್ದಿದೆ.
ಮಹಿಳೆಯರ ಮಿಶ್ರ ಸಮರ ಕಲೆಗಳ 60 ಕೆ.ಜಿ. ವಿಭಾಗದಲ್ಲಿ ಭಾರತದ ಸುಚಿಕಾ ತರಿಯಾಲ್ ಕಂಚಿನ ಪದಕ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಿಶ್ರ ಸಮರ ಕಲೆಯನ್ನು ಸೇರ್ಪಡೆ ಮಾಡಲಾಗಿದ್ದು, ಇದರಲ್ಲಿ ಭಾರತವು ಮೊದಲ ಪದಕವನ್ನು ಗೆದ್ದಿದೆ. ಮೊದಲ ದಿನ ಮಹಿಳಾ ವಿಭಾಗದ ಶೂಟಿಂಗ್ನಲ್ಲಿ ಎರಡು ಪದಕ ಪಡೆದಿದ್ದರು. ಒಟ್ಟು 4 ಬೆಳ್ಳಿ, 2 ಕಂಚಿನ ಪದಕ ಪಡೆದಿದೆ.






