ಸುಳ್ಯ:ಆಧುನಿಕ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ 13ನೇ ವಾರ್ಷಿಕ ಪುಣ್ಯ ಸ್ಮರಣೆಯ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ದ ವತಿಯಿಂದ ಸಂಘದ ಕಚೇರಿಯಲ್ಲಿ ಸಂಸ್ಮರಣಾ ಕಾರ್ಯಕ್ರಮ ಜರಗಿತು.ಸುಳ್ಯ ನಗರ ಪಂಚಾಯತ್ ಮಾಜಿ
ಅಧ್ಯಕ್ಷ ಎನ್. ಎ. ರಾಮಚಂದ್ರ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ನುಡಿ ನಮನ ಸಲ್ಲಿಸಿದರು.ಕೆವಿಜಿ ಯವರು ಸುಳ್ಯ ದ ಹೆಸರನ್ನು ಪ್ರಪಂಚದ ಭೂಪಟದಲ್ಲಿ ಪ್ರತೀ ಮನೆಯಲ್ಲಿ ವಿದ್ಯೆ, ಉದ್ಯೋಗದ ಮೂಲಕ ಅಜರಾಮರಾದವರು ಅವರ ಆದರ್ಶ ಮುಂದಿನ ಪೀಳಿಗೆಗೆ ಪರಿಚಯಿಸಲು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಾರ್ಯಚಟುವಟಿಕೆ ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಎಸ್. ಸಂಶುದ್ದೀನ್ ವಹಿಸಿದ್ದರು.ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಪುಷ್ಪ ನಮನ ಸಲ್ಲಿಸಿದರು.
ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ಸಮಿತಿಯ ಮಾಜಿ ಅಧ್ಯಕ್ಷರಾದ ಕೆ. ಟಿ. ವಿಶ್ವನಾಥ್, ಎನ್ ಎ. ಜ್ಞಾನೇಶ್, ದೊಡ್ಡಣ್ಣ ಬರಮೇಲು, ಪದಾಧಿಕಾರಿಗಳಾದ ಹರೀಶ್ ಬಂಟ್ವಾಳ್, ದಿನೇಶ್ ಅಂಬೆಕಲ್ಲು,ಖಜಾಂಚಿ ಚಂದ್ರಶೇಖರ ನಂಜೆ, ಸದಸ್ಯರಾದ ಪ್ರಭಾಕರನ್ ನಾಯರ್, ಜನಾರ್ಧನ್ ಎಸ್ ಬಿ ಎಂ, ಎ. ಸಿ. ವಸಂತ್ ಮೊದಲಾದವರು ಉಪಸ್ಥಿತರಿದ್ದರು.






