ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಇಂದು ತುಳಸಿ ಪೂಜೆ, ಬಲೀಂದ್ರ ಪೂಜೆ ಹಾಗೂ ಗೋಪೂಜೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ

ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ಪಳ್ಳತಡ್ಕ, ಧರ್ಮಣ್ಣ ನಾಯ್ಕ್ಕ ಗರಡಿ, ಮಾಲಿನಿ ಕುದ್ವ, ಶ್ರೀ ಪೈಂದೋಡಿ ಸುಬ್ರಾಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಕುದ್ವ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.















