ಸುಳ್ಯ:ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ ವತಿಯಿಂದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಗೌರವ ಸಲಹೆಗಾರರಾದ ಜಯಪ್ರಕಾಶ್ ಕಲ್ಲುಗದ್ದೆ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಸೇವಾಸಂಗಮದ
ಗೌರವಾಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ್ದರು. ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ವಿಜಯ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಉಷಾ, ಸೇವಾ ಸಂಗಮ ಟ್ರಸ್ಟ್ ಅಧ್ಯಕ್ಷ ರಕ್ಷಿತ್ ಬೊಳ್ಳೂರು, ಸಿಎಫ್ಸಿಐ ಬ್ಯಾಂಕ್ ಅಸಿಸ್ಟೆಂಟ್ ಬ್ರಾಂಚತ ಮೆನೇಜರ್
ಕೃತಿ ಎನ್.ಕೆ, ಬಿಝಿನಸ್ ಡೆವಲಪ್ಮೆಂಟ್ ಮ್ಯಾನೇಜರ್ ಶಿವಕುಮಾರ್, ಬಿಝಿನಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್
ವೃದ್ದಿ , ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಸಂದೀಪ್, ಅಂಗನವಾಡಿ ಶಿಕ್ಷಕಿ ಚಂದ್ರಾವತಿ, ಅಂಗನವಾಡಿ ಸಹಾಯಕಿ ಸುಲೋಚನ ಉಪಸ್ಥಿತರಿದ್ದರು. ಆದರ್ಶ ಬೊಳ್ಳೂರು, ಗಗನ್, ಅಂಗನವಾಡಿ ಪುಟಾಣಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು. ಪ್ರಶಾಂತ್ ಪೆರಲ್ ಅತಿಥಿಗಳನ್ನು ಸ್ವಾಗತಿಸಿದರು ಅಕ್ಷಯ್ ಕುಮಾರ್ ವಂದಿಸಿದರು ಹೇಮನಾಥ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಸಂಗಮ ಸದಸ್ಯರು ಸ್ವಾದ್ ಕ್ಯಾಟರರ್ಸ್ ಮಾಲಕ ಶ್ರವಣ್ ಉಪಹಾರ ಕೊಡುಗೆ ನೀಡಿದರು.