ಸುಳ್ಯ: ಸುಳ್ಯದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ನ ಮಹಾಸಭೆ ಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆಯುತು. ಟ್ರಸ್ಟಿನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ರೈ ಅಧ್ಯಕ್ಷತೆ ವಹಿಸಿದರು. ಟ್ರಸ್ಟ್ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ.ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ಅವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು ಟ್ರಸ್ಟಿನ ಜೊತೆ ಕಾರ್ಯದರ್ಶಿ ಜಾಹ್ನವಿ ಕಾಂಚೊಡು ವರದಿ ವಾಚಿಸಿದರು. ಟ್ರಸ್ಟಿನ ಖಜಾಂಜಿಯಾದ ಜಯಂತಿ ಎನ್.ಜೆ ಲೆಕ್ಕಪತ್ರ ಮಂಡಿಸಿದರು. ನಗರ ಪಂಚಾಯತ್ ನೂತನ ಅಧ್ಯಕ್ಷರಾದ ಶಶಿಕಲಾ ಎ ಇವರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು .ತಾಲೂಕಿನ ಆಡಳಿತ ಮಂಡಳಿ, ಅನುಷ್ಠಾನ ಸಮಿತಿ ,ಸಂಚಾಲನ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು . ಟ್ರಸ್ಟಿನ ಸಹಖಜಾಂಜಿ ಶಾರದಾ ಡಿ ಶೆಟ್ಟಿ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಪುಷ್ಪ ಮೇದಪ್ಪ ಪ್ರಾರ್ಥಿಸಿದರು .ಟ್ರಸ್ಟಿನ ನಿರ್ದೇಶಕರಾದ ಲೋಲಾಕ್ಷಿ ಧನ್ಯವಾದ ಸಮರ್ಪಿಸಿದರು. ಸವಿತಾ ಕಾಯರ ಕಾರ್ಯಕ್ರಮ ನಿರೂಪಿಸಿದರು.