ಸುಳ್ಯ:ನಾಡಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.ಬೆಳಿಗ್ಗೆಯಿಂದಲೇ ದೇವಸ್ಥಾನಗಳ ನಾಗನಕಟ್ಟೆ,ನಾಗಬನಗಳಿಗೆ ಜನರು ಆಗಮಿಸಿ ನಾಗನ ಪ್ರತಿಷ್ಠೆಗೆ ಎಳನೀರು, ಹಾಲು ಅರ್ಪಣೆ ಮಾಡಿದರು.ಅರ್ಚಕರು ನಾಗ ಪ್ರತಿಷ್ಠೆಗಳಿಗೆ
ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಎಳನೀರು ಅಭಿಷೇಕ, ಜಲಾಭಿಷೇಕ ನೆರವೇರಿಸಿದರು.ಅರಶಿನ, ಕುಂಕುಮ ಹಚ್ಚಿ ಹೂಗಳಿಂದ ಅಲಂಕರಿಸಲಾಗಿತ್ತು. ಸುಬ್ರಹ್ಮಣ್ಯ ದೇವಾಲಯಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ, ನಾಗನ ಕಟ್ಟೆಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು.ಕುಕ್ಕೆ ಸುಬ್ರಹ್ಮಣ್ಯದ

ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ವಿಶೇಷ ಪೂಜೆ ಅಭಿಷೇಕ ನಡೆಯಿತು, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನಾಗನಕಟ್ಟೆಯಲ್ಲಿ, ಗರಡಿಬೈಲು ಮೂಲನಾಗನಕಟ್ಟೆಯಲ್ಲಿ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನಾಗ ಸಾನ್ನಿಧ್ಯದಲ್ಲಿ, ಕಲ್ಚರ್ಪೆ ಶ್ರೀ ವನದುರ್ಗಾ ಮತ್ತು ಸಹಪರಿವಾರ ಸಾನ್ನಿಧ್ಯದಲ್ಲಿ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ

ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆಚರಿಸಲಾಯಿತು. ಆಲೆಟ್ಟಿ ಸದಾಶಿವ ದೇವಸ್ಥಾನ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ, ಕಾಯರ್ತೋಡಿ ಸೂರ್ತಿಲ ರಕ್ತೇಶ್ವರಿ ಸಾನ್ನಿಧ್ಯ, ಸುಳ್ಯ ಶ್ರೀರಾಮ ಮಂದಿರ, ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳ ನಾಗ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಲಾಯಿತು.










































