ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಸಂಧ್ಯಾ ಚೇತನ ಪ್ರವಾಸ ಬಳಗ ಸಹಯೋಗದಲ್ಲಿ ಆಟಿ ಕೂಟ ಕಾರ್ಯಕ್ರಮ ಸುಳ್ಯದ ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಿತು.ನಿವೃತ್ತ ಪ್ರಾಂಶುಪಾಲ
ಕೆ.ಆರ್ ಗಂಗಾಧರ ಕಾರ್ಯಕ್ರಮ ಉದ್ಘಾಟಿಸಿದರು.ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲೆ ರಮಾ ವೈ ಕೆ ಆಟಿ ಬಗ್ಗೆ ಮಾತನಾಡಿದರು. ಜೆಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಡಿ ಸುಹಾಸ್ ಮರಿಕೆ,ಸಂಧ್ಯಾ ಚೇತನ ಪ್ರವಾಸ ಬಳಗದ ಗೌರವಾಧ್ಯಕ್ಷ ಡಾ. ರಂಗಯ್ಯ,ಅಧ್ಯಕ್ಷ ಚೆನ್ನಕೇಶವ ಜಾಲ್ಸೂರು, ಅಕಾಡೆಮಿ ಸದಸ್ಯರಾದ ಗೋಪಾಲ ಪೆರಾಜೆ, ಲೋಕೇಶ್ ಊರುಬೈಲು, ಲತಾ ಪ್ರಸಾದ್ ಕುದುಪಾಜೆ ಉಪಸ್ಥಿತರಿದ್ದರು.ವಿವಿಧ ಸ್ಪರ್ಧೆಗಳು ನಡೆಯಿತು ಅರೆಭಾಷೆ ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿ,ತಾರಾ ಮಾಧವ ಚೂಂತಾರು ವಂದಿಸಿದರು.
ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು, ಸತ್ಯಶಾಂತಿ ತ್ಯಾಗಮೂರ್ತಿ ಜೇಸಿವಾಣಿ ವಾಚಿಸಿದರು.








































