ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗರಾಧನೆಯ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಭಕ್ತರ ಪ್ರವಾಹವೇ ಹರಿದು ಬಂದಿದೆ. 30 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರೂ ಎಂದು ಅಂದಾಜಿಸಲಾಗಿದೆ.
ಶಾಲೆಗಳಿಗೆ ದಸರಾ ರಜೆ ಆರಂಭವಾದನಿಂದ ಶುಕ್ರವಾರ ಸಂಜೆಯಿಂದಲೇ ಭಕ್ತರು
ಶ್ರೀ ಕ್ಷೇತ್ರಕ್ಕೆ ತಂಡೋಪ ತಂಡವಾಗಿ ಆಗಮಿಸಿದ್ದರು. ಶ್ರೀ ದೇವಳದ ವಸತಿ ಗ್ರಹಗಳೆಲ್ಲ ಭರ್ತಿಯಾಗಿತ್ತು.ಶನಿವಾರ ಬೆಳಗ್ಗಿನಿಂದಲೇ ಪವಿತ್ರ ನದಿ ಕುಮಾರಧಾರ ದಲ್ಲಿ ತೀರ್ಥ ಸ್ಥಾನ ಮಾಡಿದ ಭಕ್ತರು ಮುಖ್ಯರಸ್ತೆಯಿಂದ ರಥಬೀದಿಯಾಗಿ ಶ್ರೀ ದೇವಳಕ್ಕೆ ಆಗಮಿಸಿದ್ದರು. ಈ ದೇವಳದಲ್ಲಿ ಬೆಳಗ್ಗಿನ ಮೂರು ಬ್ಯಾಚ್ ಗಳಲ್ಲಿ ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತರು

ತುಂಬಿದ್ದರು. ಸಂಜೆಯ ಬ್ಯಾಚಿನಲ್ಲಿ ಕೂಡ ಅಧಿಕ ಸಂಖ್ಯೆಯ ಭಕ್ತರು ಆಶ್ಲೇಷ ಬಲಿ ಸೇವೆ ಸಲ್ಲಿಸಿದರು. ಹಾಗೆಯೇ ಮಧ್ಯಾಹ್ನ ನಾಗಪ್ರತಿಷ್ಠ ಮಂಟಪದಲ್ಲಿ ಚರಗುವ ನಾಗ ಪ್ರತಿಷ್ಠೆ ಪೂಜೆಯಲ್ಲಿ ಭಕ್ತರು ಮಂಟಪದ ಎದುರುಗಡೆ ವರಾಂಗಣದಲ್ಲಿ ಭಕ್ತರು ಆಸೀನರಾಗಿದ್ದರು.
ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಮಾಡಿದ ಭಕ್ತರು ತದನಂತರ ತೀರ್ಥ ಪ್ರಸಾದ ಸ್ವೀಕರಿಸಿ ಮಧ್ಯಾಹ್ನದ ಭೋಜನದ ಸವಿಊಟ ಮಾಡಿದರು. ಶ್ರೀ ದೇವಳದ ವತಿಯಿಂದ ಭಕ್ತರ ದೇವರ ದರ್ಶನ ತೀರ್ಥ ಪ್ರಸಾದ ಹಾಗೂ ಭೋಜನಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇತ್ತ ಶ್ರೀದೇವಳದ ಸುತ್ತಮುತ್ತ ಇರುವ ವಾಹನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ತುಂಬಿ ತುಳುಕುತ್ತಿದ್ದವು.









