ನಿಂತಿಕಲ್ಲು:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಶಾಸಕರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.ಕರಿಕ್ಕಳ ನಿಂತಿಕಲ್ ಮಧ್ಯೆ ಮುಚ್ಚಿಲ ಎಂಬಲ್ಲಿ ಎದುರಿಂದ ಹೋಗುತ್ತಿದ್ದ ಕಾರು
ಸಡನ್ ಬ್ರೇಕ್ ಹಾಕಿದ ಕಾರಣ ಶಾಸಕರ ಇನ್ನೋವಾ ಕಾರು ಎದುರಿನ ಕಾರಿಗೆ ಢಿಕ್ಕಿ ಹೊಡೆದಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ.ಕಾರಿನಲ್ಲಿದ್ದ ಶಾಸಕರು, ಕಾರಿನ ಚಾಲಕ ಹಾಗು ಆಪ್ತ ಸಹಾಯಕರು ಯಾವುದೇ ಗಾಯಗಳಿಲ್ಲದೆ ಪಾರಾದರು.ಶಾಸಕರು ಮತ್ತೊಂದು ಕಾರಿನಲ್ಲಿ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.







