*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಸುಳ್ಯ ನಗರಕ್ಕೆ ಕಳೆದ ಹಲವು ವರ್ಷಗಳಿಂದ ಇದ್ದ ದೊಡ್ಡ ತಲೆ ನೋವು ಪ್ಲಾಸ್ಟಿಕ್ ಸೇರಿದ ಒಣ ಕಸದ ನಿರ್ವಹಣೆ.ಕಸ ತುಂಬಿ ನಗರ ಪಂಚಾಯತ್ ಕಚೇರಿಯ ಅಂದವೇ ಕೆಡುತ್ತಿತ್ತು.
ಇದೀಗ ಸುಳ್ಯ ನಗರ ಪಂಚಾಯತ್ನ ಕಸ ವಿಲೇವಾರಿ ಘಟಕ ಕಲ್ಚರ್ಪೆಯಲ್ಲಿ ಸ್ವಚ್ಛ ಭಾರತ್ ಮಿಷನ್ನ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯಾರಂಭ ಮಾಡಿದೆ.ಸುಳ್ಯ ನಗರ ಪಂಚಾಯತ್
ಕಚೇರಿ ಸಮೀಪ, ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ತುಂಬಿ ತುಳುಕುತ್ತಿದ್ದ ಒಣ ಕಸಗಳಿಗೆ ಇನ್ನು ಮುಕ್ತಿ ದೊರಕುವ ಸಾಧ್ಯತೆ ಇದೆ.
ಏನಿದು ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ..?
ಸುಳ್ಯ ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ಕಸವನ್ನು ಸಂಗ್ರಹಿಸಿ ಒಣಕಸ, ಹಸಿ ಕಸ ಎಂದು ವಿಂಗಡಿಸಲಾಗುತ್ತದೆ. ಹಸಿ ಕಸವನ್ನು ಗೊಬ್ಬರ ಮಾಡಲು ಖಾಸಗೀಯವರಿಗೆ ನೀಡಲಾಗುತ್ತದೆ. ಒಣ ಕಸವನ್ನು ಗೋಣಿ ಚೀಲದಲ್ಲಿ ತುಂಬಿಡಲಾಗುತ್ತದೆ. ಈ ಕಸ ತುಂಬಿ ನಗರ ಪಂಚಾಯತ್ ಆವರಣ ಸೇರಿ ಎಲ್ಲೆಡೆ ಕಸದ ರಾಶಿಯೇ ರಾರಾಜಿಸುತ್ತಿದೆ. ಇದೀಗ

ಬೇಲಿಂಗ್ ಮೆಷಿನ್ನಿಂದ ಪ್ಲಾಸ್ಟಿಕ್ ತ್ಯಾಜ್ಯ ಕಟ್ಟಗಳಾಗಿ ಹೊರ ಬರುತ್ತಿರುವುದು.
ಈ ಒಣ ಕಸವನ್ನು ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಕಸ ವಿಂಗಡಣಾ ಮೆಷಿನ್ ಮೂಲಕ ಬೇರ್ಪಡಿಸಿ, ಬೇಲಿಂಗ್ ಮೆಷಿನ್ ಮೂಲಕ ಪ್ರತ್ಯೇಕ ಕಟ್ಟಗಳ ಪ್ಯಾಕ್ಗಳಾಗಿ ಮಾಡಲಾಗುತ್ತದೆ.ಈ ಪ್ಲಾಸ್ಟಿಕ್ ಕಟ್ಟಗಳನ್ನು ಮರು ಮಳಕೆ ಮಾಡುವ ಕಾರ್ಖಾನೆಗಳಿಗೆ ನೀಡುವುದು ಯೋಜನೆ.
ಏನೇನು ನಿರ್ಮಾಣ ಆಗಿದೆ..?
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರ ( ಮೆಟಿರಿಯಲ್ ರಿಕವರಿ ಫೆಸಿಲಿಟಿ -ಎಂಆರ್ಎಫ್) ನಿರ್ಮಿಸಲಾಗಿದೆ. 32 ಲಕ್ಷದಲ್ಲಿ ಕೇಂದ್ರದ ಕಟ್ಟಡ, ಕಟ್ಟಡದಲ್ಲಿ ಒಟ್ಟು

ಕಸ ಬೇರ್ಪಡಿಸುವ ಯಂತ್ರ.
15 ಲಕ್ಷ ವೆಚ್ಚದಲ್ಲಿ ವಿವಿಧ ಯಂತ್ರಗಳನ್ನು ಅಳವಡಿಸಲಾಗಿದೆ. 9 ಲಕ್ಷದಲ್ಲಿ ಒಣ ತ್ಯಾಜ್ಯ ಬೇರ್ಪಡಿಸುವ ಯಂತ್ರ, ಲಿಪ್ಟಿಂಗ್ ಯಂತ್ರ, ಶಿಪ್ಟಿಂಗ್ ವೆಯಿಕಲ್ ಮತ್ತು 6 ಲಕ್ಷ ವೆಚ್ಚದಲ್ಲಿ ಬೇಲಿಂಗ್ ಯಂತ್ರ (ಸಕ್ಕಿಂಗ್ ಮೆಷಿನ್) ಅಳವಡಿಸಲಾಗಿದೆ.
ಕಾರ್ಯಾಚರಣೆ ಹೇಗೆ..?
ವಿದ್ಯತ್ ಚಾಲಿತ ಯಂತ್ರಗಳು ಇಲ್ಲಿ ಕಾರ್ಯಾಚರಿಸುತ್ತದೆ. ಯಂತ್ರದ ಮೂಲಕ ಬೇರ್ಪಡಿಸಿದ ಒಣ ಕಸವನ್ನು ವಿವಿಧ ವಿಭಾಗಗಳಾಗಿ ಬೇಲಿಂಗ್ ಮೆಷಿನ್ಗೆ ಹಾಕಿ ಕಟ್ಟುಗಳಾಗಿ ಮಾಡಲಾಗುತ್ತದೆ. ಒಮ್ಮೆಗೆ ಸುಮಾರು 200 ಕೆಜಿಯ ಕಟ್ಟವನ್ನು ಮಾಡಬಹುದಾದರು ಸಾಗಾಟದ ದೃಷ್ಠಿಯಿಂದ 80 ಕೆಜಿಯಿಂದ 100 ಕೆಜಿ ತನಕದ ಕಟ್ಟಗಳಾಗಿ ಮಾಡಲಾಗುತ್ತದೆ.ಚಂದದ ಪ್ಯಾಕ್ಗಳಾಗಿ ಹೊರ ಬರುವ ಕಸದ ಕಟ್ಟಗಳನ್ನು

ಒಣ ಕಸವನ್ನು ಕಟ್ಟಗಳಾಗಿ ಮಾಡಿ ಸಂಗ್ರಹಿಸಿರುವುದು.
ತೂಕ ಮಾಡಿ ಕೆಜಿ ನಮೂದಿಸಿ ಸಂಗ್ರಹ ಮಾಡಲಾಗುತ್ತದೆ.ಬಿಳಿ ಪ್ಲಾಸ್ಟಿಕ್, ಬಣ್ಣದ ಪ್ಲಾಸ್ಟಿಕ್ ಕವರ್ಗಳು, ಬಟ್ಟೆಗಳು, ಕಾಗದ, ಜ್ಯೂಸ್, ಮದ್ಯ ಮತ್ತಿತರ ತುಂಬುವ ಟೆಟ್ರಾ ಪ್ಯಾಕ್ಗಳು, ಪ್ಲಾಸ್ಟಿಕ್ ಬಾಟಲಿಗಳು ಹೀಗೆ ವಿವಿಧ ಒಣ ಕಸಗನ್ನು ಕಟ್ಟಗಳಾಗಿ ಮಾಡಲಾಗುತ್ತಿದೆ.
ಈ ಕಟ್ಟಗಳು ಎಲ್ಲಿಗೆ ಸಾಗಾಟ..?
ಕಲ್ಚರ್ಪೆಯಲ್ಲಿ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ಕೆಲವು ಸಮಯದಿಂದ ಕಾರ್ಯಾಚರಿಸುತಿದೆ. ಕೇಂದ್ರ ಆರಂಭವಾದ ಮೇಲೆ ನಗರ ಪಂಚಾಯತ್ ಮುಂಭಾಗ ಮತ್ತು ಕಲ್ಚರ್ಪೆಯಲ್ಲಿ ತುಂಬಿಟ್ಟ ಒಣ ಕಸಗಳು ನಿಧಾನವಾಗಿ ಕಡಿಮೆಯಾಗುತಿದೆ. ಕೇಂದ್ರದ ಅಧಿಕೃತ ಉದ್ಘಾಟನೆ ಮೊನ್ನೆ ತಾನೆ ನಡೆದಿದೆ.ಪ್ಲಾಸ್ಟಿಕ್ ಮರು ಬಳಕೆ ಮಾಡುವ ಕಾರ್ಖಾನೆಗಳಿಗೆ ಈ

ಬೇಲಿಂಗ್ ಮೆಷಿನ್
ಪ್ಲಾಸ್ಟಿಕ್ ಸೇರಿದ ಒಣ ಕಸವನ್ನು ಕಳುಹಿಸಲು ನಗರ ಪಂಚಾಯತ್ ಯೋಜನೆ ರೂಪಿಸಿದೆ. ಸಿಮೆಂಟ್, ಡಾಮರು ಮತ್ತಿತರ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮರು ಬಳಕೆ ಮಾಡಲಾಗುತ್ತದೆ.
ಈಗಾಗಲೇ 4-5 ಟನ್ ಒಣ ತ್ಯಾಜ್ಯಗಳನ್ನು ಕಟ್ಟುಗಳಾಗಿ ಮಾಡಲಾಗಿದೆ. ಸುಮಾರು 15 ಟನ್ ಆದ ಬಳಿಕ ಇದನ್ನು ಟೆಂಡರ್ ಕರೆದು ಪ್ಲಾಸ್ಟಿಕ್ ಮರುಬಳಕೆ ಮಾಡುವ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುವುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್.ಹೆಚ್.ಆರ್ ತಿಳಿಸಿದ್ದಾರೆ.
‘ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ಮೇಲೆ ಒಣ ಕಸ ವಿಲೇವಾರಿ ಸುಲಭವಾಗಿದೆ.ಮರು ಬಳಕೆ ಮಾಡುವ ಕಾರಣ ಪ್ಲಾಸ್ಟಿಕ್ ಕಸದ ಸಮಸ್ಯೆ ಶೇ.90ರಷ್ಟು ಕಡಿಮೆಯಾಗಲಿದೆ.
-ಬಸವರಾಜ್ ಹೆಚ್.ಆರ್.
ಮುಖ್ಯಾಧಿಕಾರಿ
ನಗರ ಪಂಚಾಯತ್ ಸುಳ್ಯ







