ಸುಳ್ಯ:ಸುಳ್ಯ ನಗರದ ರಸ್ತೆಯಲ್ಲಿರುವ ಹೊಂಡ ಮುಚ್ಚಬೇಕು, ರಸ್ತೆ ಬದಿಯ ಬೆಳೆದಿರುವ ಪೊದೆಗಳನ್ನು ಕಡಿದು ಚರಂಡಿ ದುರಸ್ತಿ ಮಾಡಬೇಕು ಎಂದು ಸುಳ್ಯ ನಗರ ಬಿಜೆಪಿ ವತಿಯಿಂದ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಸುಳ್ಯ ನಗರದ ಪ್ರಮುಖ ರಸ್ತೆಯಲ್ಲಿ ಶಾಸ್ತಿವೃತ್ತದಲ್ಲಿ, ಗಾಂಧಿನಗರ ಸೇರಿ ವಿವಿಧ ಕಡೆ ಹೊಂಡ ಹಾಗೂ
ರಥಬೀದಿಯಲ್ಲಿ ಒಳಚರಂಡಿ ಮ್ಯಾನ್ ಹೋಲ್ ಕುಸಿದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದ್ಉ ವಾಹನ ಅಪಘಾತ ಆಗುವ ಸಂಭವವಿದೆ. ಅದುದರಿಂದ ಈ ಹೊಂಡಗಳನ್ನು ತಕ್ಷಣ ಮುಚ್ಚಬೇಕು. ರಸ್ತೆ ಬದಿಯ ಕಾಡು ಪೊದೆಗಳನ್ನು ಕಡಿಸದೆ ರಸ್ತೆಗೆ ವಾಲಿಕೊಂಡು ಹುಲ್ಲು ಮತ್ತು ಮರಗಿಡಗಳಿವೆ. ಇದರಿಂದ ರಸ್ತೆ ಸರಿಯಾಗಿ ಕಾಣಿಸುತ್ತಿಲ್ಲ.ಎಲ್ಲಾ ರಸ್ತೆಗಳ ಬದಿಗಳನ್ನು ಸ್ವಚ್ಛಗೊಳಿಸಬೇಕು. ಚರಂಡಿಯ ಹೂಳೆತ್ತುವಿಕೆ ಕೆಲಸ ಇನ್ನೂ ಆಗದಿರುವುದರಿಂದ ರಸ್ತೆಯಲ್ಲಿಯೇ ನೀರು ಸಂಚರಿಸುತ್ತದೆ. ಇದರಿಂದ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತದೆ .ಈ ಎಲ್ಲಾ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಬಿಜೆಪಿ ನಗರ ಸಮಿತಿ ಅಧ್ಯಕ್ಷ ಎ.ಟಿ.ಕುಸುಮಾಧರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಬುದ್ಧ ನಾಯ್ಕ್, ಗಿರೀಶ್ ಕಲ್ಲುಗದ್ದೆ, ಸುಪ್ರಿತ್ ಮೋಂಟಡ್ಕ, ಜಗನ್ನಾಥ ಜಯನಗರ, ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ, ಸಸತೀಶ್.ಕೆ.ಜಿ, ಪ್ರಶಾಂತ್ ಕಾಯರ್ತೋಡಿ ಉಪಸ್ಥಿತರಿದ್ದರು.





























