ಸುಳ್ಯ:ಐಫೋನ್ 18 ಪ್ರೊ ಸರಣಿಯ ಮೊಬೈಲ್ ಪೋನ್ಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.ಸುಳ್ಯದ ಪ್ರತಿಷ್ಠಿತ ಮೊವೈಲ್ ಸಂಸ್ಥೆ ಮೊಬೈಲ್ ಗ್ಯಾರೇಜ್ನಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಬಿಡುಗಡೆ ಮಾಡಿದೆ. ಐಫೋನ್ 18 ಸರಣಿಗಾಗಿ ಕಾಯುತ್ತಿದ್ದ
ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.ಕಳೆದ ವರ್ಷದ ಐಫೋನ್
17 ಪ್ರೊ ಮಾದರಿಗಳಿಗೆ ಹೋಲಿಸಿದರೆ, ಈ ಐಫೋನ್ 18 ಜೋಡಿಯು ಗಮನಾರ್ಹ ಹಾರ್ಡ್ವೇರ್ ನವೀಕರಣ ಒಳಗೊಂಡಿವೆ. ಇವು ಆ್ಯಪಲ್ನ ಲೇಟೆಸ್ಟ್ ಜನರೇಶನ್ನ ಎ20 ಪ್ರೊ ಚಿಪ್ಸೆಟ್ ಮೂಲಕ ಕಾರ್ಯನಿರ್ವಹಿಸುತ್ತವೆ. ಕಂಪನಿಯ ಹೊಸ ಆಂತರಿಕ ಸಿ2 ಮೋಡೆಮ್ ಅನ್ನು ಒಳಗೊಂಡಿವೆ. ವೇರಿಯಬಲ್ ಅಪರ್ಚರ್ ಹೊಂದಿರುವ 48 ಎಂಪಿ ಫ್ಯೂಷನ್ ಮುಖ್ಯ ಕ್ಯಾಮೆರಾ, ದೀರ್ಘ ಬ್ಯಾಟರಿ ಬಾಳಿಕೆಯ

ವೈಶಿಷ್ಟ್ಯವಿದೆಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಆರಂಭಿಕ ಮಾದರಿಗಳ ಬೆಲೆ ಕ್ರಮವಾಗಿ ರೂ1,64,900 ಮತ್ತು ರೂ.1,79,900 ಆಗಿದೆ.ಸೆಪ್ಟೆಂಬರ್ 18 ರಿಂದ ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
iPhone 18 Pro ಮತ್ತು iPhone 18 Pro Max ವೈಶಿಷ್ಟ್ಯ:
ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಐಫೋನ್ಗಳು ಆ್ಯಪಲ್ನ ಹೊಸ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಹೊಂದಿವೆ.
ಹೊಸ ಸಿರಿ AI , iOS 27 ಆಪರೇಟಿಂಗ್ ಸಿಸ್ಟಂ ಹೊಂದಿವೆ.ಐಫೋನ್ ಪ್ರೊ ಮಾದರಿಯು 6.3 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 18 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ಪ್ಲೇ ಹೊಂದಿದೆ.ಎರಡರಲ್ಲೂ ಪ್ರೊಮೋಷನ್ ತಂತ್ರಜ್ಞಾನ ಮತ್ತು ಆಲ್ವೇಸ್ ಆನ್ ಮೋಡ್ನೊಂದಿಗೆ ಸೂಪರ್ ರೆಟಿನಾ XDR OLED ಪರದೆ ಇದೆ. ಎರಡೂ ಫೋನ್ಗಳು

ಅಲ್ಯೂಮಿನಿಯಂ ಬಾಡಿ ಹೊಂದಿದ್ದು, ಹಿಂದಿನ ಮಾದರಿಗಳಂತೆ ಆ್ಯಕ್ಷನ್ ಬಟನ್ ಮತ್ತು ಕ್ಯಾಮೆರಾ ನಿಯಂತ್ರಣ ಬಟನ್ ಉಳಿಸಿಕೊಂಡಿವೆ. ಆ್ಯಪಲ್ನ ಹೊಸ A20 ಪ್ರೊ ಪ್ರೊಸೆಸರ್ ಐಫೋನ್ 18 ಪ್ರೊ ಸರಣಿಗೆ ಶಕ್ತಿ ನೀಡಿದೆ. ಎರಡೂ ಸ್ಮಾರ್ಟ್ಫೋನ್ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಇದರಲ್ಲಿ ವೇರಿಯಬಲ್ ಅಪರ್ಚರ್ ಹೊಂದಿರುವ 48 ಮೆಗಾಪಿಕ್ಸೆಲ್ ಫ್ಯೂಷನ್ ಪ್ರೈಮರಿ ಸೆನ್ಸರ್ ಸಹ ಇದೆ.
ಆ್ಯಪಲ್ ಸಂಸ್ಥೆಯು ಐಫೋನ್ಗೆ ಅಪರ್ಚರ್ ನಿಯಂತ್ರಣ ತಂದಿರುವುದು ಇದೇ ಮೊದಲು. ಹೊಸ ಸೆನ್ಸರ್ ಅನ್ನು ಕಡಿಮೆ ಬೆಳಕಿರುವ ಸಂದರ್ಭ ಛಾಯಾಗ್ರಹಣ ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.
ಈ ಹೊಸ ಹ್ಯಾಂಡ್ಸೆಟ್ಗಳಲ್ಲಿನ ಕ್ಯಾಮೆರಾ ಅಪ್ಲಿಕೇಶನ್ ಪ್ರೊ ಕಂಟ್ರೋಲ್ಗಳನ್ನು ಹೊಂದಿದ್ದು, ಬಳಕೆದಾರರು ಅಪರ್ಚರ್, ಶಟರ್ ಸ್ಪೀಡ್ ಮತ್ತು ವೈಟ್ ಬ್ಯಾಲೆನ್ಸ್ ಅನ್ನು ಹಸ್ತಚಾಲಿತವಾಗಿ ಹೊಂದಿಸಲು

ಅನುವು ಮಾಡಿಕೊಡುತ್ತದೆ.ಕ್ಯಾಮೆರಾದಲ್ಲಿ 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 48 ಮೆಗಾಪಿಕ್ಸೆಲ್ ಟೆಲಿಫೋಟೊ ಲೆನ್ಸ್ ಸಹ ಇದೆ. ಕಪ್ಪು, ಶ್ವೇತ ವರ್ಣ, ಗ್ಲೇಸಿಯರ್ ಮತ್ತು ಬರ್ಗುಂಡಿ ಬಣ್ಣಗಳಲ್ಲಿ ಲಭ್ಯವಿವೆ.
ಬ್ಯಾಟರಿ ಬಾಳಿಕೆ: ಐಫೋನ್ 18 ಪ್ರೊನಲ್ಲಿ 43 ಗಂಟೆಗಳವರೆಗೆ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ನಲ್ಲಿ 45 ಗಂಟೆಗಳವರೆಗೆ ವಿಡಿಯೊ ಪ್ಲೇಬ್ಯಾಕ್ ಬ್ಯಾಟರಿ ಸಾಮರ್ಥ್ಯವಿದೆ.256ಜಿಬಿ / 512ಜಿಬಿ / 1ಟಿಬಿ / 2ಟಿಬಿ.ಸ್ಟೋರೇಜ್ ಲಭ್ಯವಿದೆ ಎಂದು ಐಫೋನ್ಗಳ ಸುಳ್ಯದ ಅಧಿಕೃತ ಮಾರಾಟಗಾರರಾದ ಮೊಬೈಲ್ ಗ್ಯಾರೇಜ್ ಸಂಸ್ಥೆ ತಿಳಿಸಿದೆ.









