ಸುಳ್ಯ:ಸುಳ್ಯ- ಕೊಡಿಯಾಲ್ಬೈಲ್ – ದುಗ್ಗಲಡ್ಕ ರಸ್ತೆಯ ಆಯ್ದ ಭಾಗದಲ್ಲಿ 1 ಕಿ.ಮೀಗೂ ಅಧಿಕ ರಸ್ಯೆ ರೂ.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.ಉಬರಡ್ಕ ಗ್ರಾಮ ಪಂಚಾಯತ್ ಗಡಿಯಿಂದ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ
ಕಾಮಗಾರಿ ನಡೆಯುತಿದೆ.ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್,ಇಂಜಿನಿಯರ್ ವೆಂಕಟೇಶ್ ಮೊದಲಾದವರು ಕಾಮಗಾರಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಪ್ರಮುಖರಾದ ಪಿ.ಎಸ್. ಗಂಗಾಧರ, ಎಂ.ಹೆಚ್. ಸುರೇಶ್ ಅಮೈ ಇದ್ದರು. ಮೋರಿ ರಚನೆ ಸಂದರ್ಭದಲ್ಲಿ ದೊಡ್ಡ ಪೈಪ್ ಅಳವಡಿಸುವಂತೆ ಮತ್ತು ರಸ್ತೆ ಅತಿಕ್ರಮಣ ತೆರವು ಮಾಡುವಂತೆ ಅವರು ಆಗ್ರಹಿಸಿದರು. ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಾಧಿಕಾರಿ ಇಂಜಿನಿಯರ್ಗೆ ಸೂಚಿಸಿದರು.





























