ಸುಳ್ಯ:ಗುಡ್ಡ ಕುಸಿದು ಪತ್ರಕರ್ತ ಹಸೈನಾರ್ ಜಯನಗರ ಅವರ ಜಯನಗರದ ಮನೆಗೆ ಹಾನಿ ಸಂಭವಿಸಿದೆ.ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಮನೆಯ ಹಿಂಬಾಗದ ಗುಡ್ಡ ಕುಸಿದು ಭಾರೀ ಪ್ರಮಾಣದ

ಮಣ್ಣು, ಕಲ್ಲು ಮನೆಯ ಗೋಡೆಗೆ ಬಿದ್ದಿದೆ.ಇದರಿಂದ ಮನೆಯ ಗೋಡೆಯಲ್ಲಿ ಬಿರುಕು ಉಂಟಾಗಿದೆ. ಇತ್ತೀಚೆಗೆ ನಿರ್ಮಾಣಗೊಂಡ ಗೋಡೆಯ ಲಿಂಟಲ್, ಕಿಡಕಿಗೆ ಹಾನಿ ಸಂಭವಿಸಿದೆ.
ಸ್ಥಳಕ್ಕೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಸೈನಾರ್ ಜಯನಗರ, ಪತ್ರಕರ್ತ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.












