ಸುಳ್ಯ: ಸುಳ್ಯ ವಿಶ್ವ ಹಿಂದೂ ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯಲಿರುವ 11 ನೇ ವರ್ಷದ ಆಮಂತ್ರಣ ಪತ್ರ ಬಿಡುಗಡೆಯು ಆ.13 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.ಸೆ.2 ರಂದು ನಡೆಯಲಿರುವ ಮೊಸರು ಕುಡಿಕೆ ಉತ್ಸವ ಹಾಗೂ
ವೀರ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಶೋಭಾಯಾತ್ರೆಯು ಸುಳ್ಯದ ಪ್ರಮುಖ ರಸ್ತೆಯ ಮೂಲಕ ಸಾಗಿ ಬಂದು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭೆಯು ಸಂಜೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ನೀಡಿ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ದಸರಾ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಸುಳ್ಯ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ,
ಮೊಸರು ಕುಡಿಕೆ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಉಪಾಧ್ಯಕ್ಷ ಸುನಿಲ್ ಕೇರ್ಪಳ, ದೇವಿಪ್ರಸಾದ್ ಅತ್ಯಾಡಿ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ರಾಜೇಶ್ ಬೇರಿಕೆ, ಕೋಶಾಧಿಕಾರಿ ನವೀನ್ ಎಲಿಮಲೆ, ವ್ಯವಸ್ಥಾ ಪ್ರಮುಖ್ ವಿನಯ್ ಪಾಡಾಜೆ, ರಾಜೇಶ್ ಕಲ್ಲುಮುಟ್ಲು, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಹಿಂದೂ ಮುಖಂಡರಾದ ಸುರೇಶ್ ಕಣೆಮರಡ್ಕ, ರಾಜೇಶ್ ರೈ ಮೇನಾಲ, ವರ್ಷಿತ್ ಚೊಕ್ಕಾಡಿ, ಉಪೇಂದ್ರ ನಾಯಕ್, ರಜತ್ ಅಡ್ಕಾರ್, ರಾಜು ಪಂಡಿತ್, ಸತೀಶ್ ಕೆ.ಜಿ,ಸನತ್ ಆಗ್ರೋ ಸುಳ್ಯ, ಸುನಿಲ್ ರೈ ಮೇನಾಲ, ಮನೋಜ್ ಕಲ್ಲುಮುಟ್ಲು, ಅಮೃತ್ ಕಾಂತಮಂಗಲ, ಪ್ರಮೋದ್ ಮಜಿಕೋಡಿ, ಅಶೋಕ ಅಡ್ಕಾರ್, ಅರ್ಜುನ್ ತೊಡಿಕಾನ, ರೂಪೇಶ್ ಪೂಜಾರಿಮನೆ, ಪ್ರಕಾಶ್ ಜಯನಗರ,ಗಿರೀಶ್ ಮುಳ್ಯ ಅಟ್ಲೂರು, ಉಮೇಶ್ ಸರಳಿಕುಂಜ, ಕಿರಣ್ ಜಯನಗರ, ಮಿಥುನ್, ಭೀಮ್ ರಾಮ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.