ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗರಡಿಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.ಕಳೆದ ತಿಂಗಳು ನಡೆದ ಸ್ವರ್ಣಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಮೇ.15 ರಂದು ಬೆಳಗ್ಗೆ
ದೇಗುಲದ ಎದುರು ಇರುವ ಚಾವಡಿಯಿಂದ ಶ್ರೀ ಉಳ್ಳಾಕ್ಲು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳ ಭಂಡಾರಗಳನ್ನು ಗರಡಿಬೈಲ್ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಸಾನಿಧ್ಯ ಕಲಶಪೂಜೆ,ದೈವಸ್ಥಾನದಲ್ಲಿ ಹೊಸ ಮಂಚ ಪ್ರತಿಷ್ಠೆ, ದೈವಗಳಿಗೆ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ,ಸಂಕ್ರಮಣ ಪೂಜೆ, ಪ್ರಸಾದ ವಿತರಣೆ ನಡೆಯಿತು.

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಸಂತೋಷ್
ಕುಮಾರ್ ರೈ ಪಲತ್ತಡ್ಕ, ಧರ್ಮಪಾಲ ಮರಕ್ಕಡ, ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಪವಿತ್ರ ಮಲ್ಲೆಟ್ಟಿ, ಮಾಲಿನಿ ಕುದ್ವ ಹಾಗೂ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.















