ನವದೆಹಲಿ: ವಾರಣಾಸಿಯಲ್ಲಿ ಆರಂಭಿಕ ಹಿನ್ನಡೆಯಲ್ಲಿದ್ದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಗೆಲುವಿನ ಟ್ರಾಕ್ಗೆ ಮರಳಿದ್ದು 33 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ. ಗೃಹ ಸಚಿವ ಅಮಿತ್ ಷಾ ಗುಜರಾತ್ನ
ಗಾಂಧಿನಗರದಲ್ಲಿ 5.5 ಲಕ್ಷಗಳ ಅಂತರದ ಮುನ್ನಡೆಯಲ್ಲಿದ್ದಾರೆ. ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಲಕ್ನೋ ಕ್ಷೇತ್ರದಲ್ಲಿ , ನಾಗಪುರದಲ್ಲಿ ನಿತಿನ್ ಗಡ್ಕರಿ ಮುನ್ನಡೆಯಲ್ಲಿದ್ದಾರೆ. ಅಮೇಟಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ 40 ಸಾವಿರ ಮತಗಳ ಅಂತರದಲ್ಲಿ ಹಿನ್ನಡೆಯಲ್ಲಿದೆ. ಪಶ್ಚಿಮ ಬಂಗಾಳದ ಬಹರಾಮ್ಪುರ ಕ್ಷೇತ್ರದಲ್ಲಿ ಕ್ರಿಕೆಟರ್ ಯೂಸುಫ್ ಪಠಾಣ್ ಮುನ್ನಡೆಯಲ್ಲಿದ್ದಾರೆ.