ಸುಳ್ಯ:ಸುಳ್ಯ ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಮತ್ತು ಲೈನ್ಮ್ಯಾನ್ಗಳ ವರ್ಗಾವಣೆ ಕುರಿತಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ ಚರ್ಚೆ ನಡೆಸಿದರು.ಹಲವು ದಿನಗಳಿಂದ ತಾಲೂಕಿನಲ್ಲಿ
ವಿದ್ಯುತ್ ಸಮಸ್ಯೆ ಇದೆ. ಅಲ್ಲದೆ ಲೈನ್ಮೆನ್ಗಳ ವರ್ಗಾವಣೆ ಆದೇಶ ಬಂದಿದ್ದು ವರ್ಗಾವಣೆ ಅದರೆ ಈ ಭಾಗದಲ್ಲಿ ಸಾಕಷ್ಟು ತೊಂದರೆಯಾಗುತ್ತದೆ ಹಾಗಾಗಿ ಸದ್ಯಕ್ಕೆ ಯಾವುದೇ ರೀತಿಯ ವರ್ಗಾವಣೆಗಳನ್ನು ಮಾಡಬಾರದು ಎಂದು ಶಾಸಕರು ಆಗ್ರಹಿಸಿದರು. ಸುಳ್ಯದ 110 ಕೆವಿ ಲೈನ್ ಕಾಮಗಾರಿ ಆದಷ್ಟು ಬೇಗ ಮುಗಿಸುವಂತೆ ಶಾಸಕರು ಸೂಚಿಸಿದರು ಇದ್ದಕ್ಕೆ ಸ್ಪಂದಿಸಿದ ಎಂ.ಡಿ ಅವರು ವಿಶೇಷ ಗಮನಹರಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.