ಸುಳ್ಯ:ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ಖಂಡಿಸಿ ರಿಕ್ಷಾ ಚಾಲಕರು ಒಂದು ಗಂಟೆಗಳ ಕಾಲ ಓಡಾಟ ನಿಲ್ಲಿಸಿ ಪ್ರತಿಭಟನೆ ನಡೆಸಿದರು.ಸುಳ್ಯ ತಾಲೂಕಿನ ಬಿಎಂಎಸ್ ಸಂಯೋಜಿತ
ರಿಕ್ಷಾ ಚಾಲಕ ಮಾಲಕ ಸಂಘಟನೆ ಸುಳ್ಯ ನಗರ ಸೇರಿದಂತೆ ತಾಲೂಕೊನಾದ್ಯಂತ 11 ಗಂಟೆಯಿಂದ 12 ಗಂಟೆಯ ತನಕ ಒಂದು ಗಂಟೆಗಳ ಕಾಲ ಪ್ರತಿಭಟನಾ ಸೂಚಕವಾಗಿ ಸಂಪೂರ್ಣ ಓಡಾಟ ನಿಲ್ಲಿಸಿದರು. ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣಗಳಲ್ಲಿ ಪ್ರತಿಭಟನಾ ಸೂಚಕವಾಗಿ ಒಂದು ಗಂಟೆಗಳ ಕಾಲ ಓಡಾಟ ನಿಲ್ಲಿಸಿದ್ದರು.
ಸುಳ್ಯ ನಗರದಲ್ಲಿ ರಿಕ್ಷಾ ಚಾಲಕರು ಓಡಾಟ ನಿಲ್ಲಿಸಿ ರಾಷ್ಟ್ರೀಯವಾದಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಸಿದರು.







