ಸುಳ್ಯ:ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ದಯಾಮಣಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಅಮೃತಭವನ ಕಲಾಮಂದಿರದಲ್ಲಿ ನಡೆಯಿತು.ಕಾಲೇಜಿನ ಆಡಳಿತ ಮಂಡಳಿಯಾದ ದ.ಕ.ಗೌಡ ವಿದ್ಯಾ ಸಂಘ, ಶ್ರೀ ಶಾರದಾ ಪದವಿಪೂರ್ವ ಕಾಲೇಜು ಮತ್ತು ಶ್ರೀ ಶಾರದಾ ಪ್ರೌಢಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ
ಅಧ್ಯಕ್ಷತೆ ವಹಿಸಿದ್ದ ದ.ಕ.ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಕೆ. ದಯಾಮಣಿ ಹಾಗೂ ಪತಿ ಉಮೇಶ್ ಮಳುವೇಲು ಅವರನ್ನು ಸನ್ಮಾನಿಸಿದರು. ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ರೇವತಿ ನಂದನ್, ನಿರ್ದೇಶಕರಾದ

ಎಂ.ಪಿ.ಉಮೇಶ್,ತಂಗಮ್ಮ, ಉಮೇಶ್, ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸ್ವರ್ಣಕಲಾ ಎ.ಎಸ್, ಪ್ರೌಢ ಶಾಲೆಯ ಪ್ರಾಂಶುಪಾಲೆ ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸ್ವರ್ಣಕಲಾ ಎ.ಎಸ್. ಸ್ವಾಗತಿಸಿದರು. ಉಪನ್ಯಾಸಕರಾದ ಪ್ರಸನ್ನ ನಿಡ್ಯಮಲೆ ಅಭಿನಂದನಾ ಭಾಷಣ ಮಾಡಿದರು. ಉಪನ್ಯಾಸಕಿ ಕೃತಿ ಅಭಿನಂದನಾ ಪತ್ರ ವಾಚಿಸಿದರು. ಅತಿಥಿಗಳು, ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಶುಭ ಹಾರೈಸಿದರು. ಉಪನ್ಯಾಸಕರಾದ ದಾಮೋದರ ಕಾರ್ಯಕ್ರಮ ನಿರೂಪಿಸಿದರು.











