ಸುಳ್ಯ:ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಮೇ.6 ರಂದು ಮಂಗಳವಾರ ಪೂ.11ರಿಂದ ಪೂರ್ವಾಹ್ನ 12 ಗಂಟೆಯ ತನಕ ಸುಳ್ಯ ಉಪವಿಭಾಗ
ಕಛೇರಿಯಲ್ಲಿ ನಡೆಯಲಿದೆ. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಸುಳ್ಯ ಉಪವಿಭಾಗ ಕಚೇರಿಯಲ್ಲಿ ಅಥವಾ ದೂರವಾಣಿ ಕರೆಯ ಮುಖಾಂತರ ಸಲ್ಲಿಸಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.















