ಸುಳ್ಯ:ಕರ್ನಾಟಕ ಸರಕಾರ ಜಾರಿಗೆ ತಂದಿರುವ ಪ್ರತಿ ಗೃಹ ಬಳಕೆಯ ಗ್ರಾಹಕರಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಡಿ ಸುಳ್ಯ ಹಾಗು ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಸಬ್ಸಿಡಿ ರೂಪದಲ್ಲಿ
ಒಟ್ಟು 68,18,66,385 ರೂ ನೀಡಲಾಗಿದೆ ಎಂದು ಮೆಸ್ಕಾಂ ಹೇಳಿದೆ. ಸುಳ್ಯ ಹೋಬಳಿ ಮಟ್ಟದ ಪ್ರಜಾಸೇವೆ ಸಭೆಯಲ್ಲಿ ಸಬ್ಸಿಡಿ ವಿವರ ಪ್ರಕಟಿಸಿದ ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ 2023-27 ವರ್ಷದ ಅವಧಿಯಲ್ಲಿ ಒಟ್ಟು 53,75,87,192 ರೂ ಮತ್ತು ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯಲ್ಲಿ
ಒಟ್ಟು 14,42,79,293 ರೂ ಸಬ್ಸಿಡಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಜಾಸೇವೆ ಸಭೆಯಲ್ಲಿ ಗೃಹಜ್ಯೋತಿ ಪರಿಶೀಲನೆ, ದಾಖಲಾತಿ ಕೌಂಟರ್ ತೆರೆಯಲಾಗಿತ್ತು.ಮೆಸ್ಕಾಂ ಸುಳ್ಯ ಉಪವಿಭಾಗದ ಎಇಇ ಹರೀಶ್ ನಾಯ್ಕ್, ಸುಬ್ರಹ್ಮಣ್ಯ ಉಪವಿಭಾಗದ ಎಇಇ ಸತೀಶ್ ಸಫಲ್ಯ, ಸಹಾಯಕ ಲೆಕ್ಕಾಧಿಕಾರಿ ಅಶೋಕ್, ನವನೀತ್ ಬೆಟ್ಟಂಪಾಡಿ ಉಪಸ್ಥಿತದ್ದರು.










