ಸುಳ್ಯ:ನಮ್ಮ ಆರೋಗ್ಯಕ್ಕೆ ಹಿತವಾದುದು ಯಾವುದು ಎನ್ನುವ ಜಾಗೃತಿ ಪ್ರತಿಯೊಬ್ಬರಿಗೂ ಬೇಕು, ಆ ರೀತಿಯ ಕಾಳಜಿ, ಜಾಗೃತಿ ನಮ್ಮ ಆರೋಗ್ಯ ಕಾಪಾಡಲು ಪೂರಕ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ನಡೆಯುತ್ತಿರುವ ಜೇಸಿಐ ಸಪ್ತಾಹದ ಅಂಗವಾಗಿ ಸೆ. 6ರಂದು ಸುಳ್ಯದ ವೆಂಕಟ್ರಮಣ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆದ
‘ಸಸ್ಟೈನೇಬಲ್ ಶಿಪ್ಪಿಂಗ್ ಡೇ’ ಕಾರ್ಯಕ್ರಮದಲ್ಲಿ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಬಾಟಲಿಗಳ ಬಗ್ಗೆ ಜಾಗೃತಿ ಮೂಡಿಸುವ ಜೆಸಿಐಯ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. ಯಾವುದನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬ ಅರಿವು ಜನರಲ್ಲಿ ಮೂಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಈ ಅಭಿಯಾನ ಮಾದರಿ ಎಂದು ಅವರು ಹೇಳಿದರು.
ಜೇಸಿಐ ಘಟಕಾದ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ 15, ಜೇಸಿಐ ಸಮುದಾಯ ಅಭಿವೃದ್ಧಿ ವಿಭಾಗದ ವಲಯ ನಿರ್ದೇಶಕ ವಿಘ್ನೇಶ್ ಪ್ರಸಾದ್ ರಾವ್, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಸಂಶುದ್ದೀನ್, ಜೇಸಿಐ ಮಾಜಿ ವಲಯಾಧ್ಯಕ್ಷ ಲ ಅಶೋಕ್ ಚೂಂತಾರು ಉಪಸ್ಥಿತರಿದ್ದರು.ವಿಘ್ನೇಶ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಸುರೇಶ್ ಕಾಮತ್, ಕಾರ್ಯದರ್ಶಿ ತಾರಾ ಚೂಂತಾರು ಉಪಸ್ಥಿತರಿದ್ದರು. ಪ್ರಶಾಂತ್ ಅಂಬೆಕಲ್ಲು ಜೇಸಿ ವಾಣಿ ವಾಚಿಸಿದರು. ಪೂರ್ವವಾಧ್ಯಕ್ಷ ರಂಜಿತ್ ಕುಕ್ಕೆಟ್ಟಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ನವೀನ್ ಕುಮಾರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಜೇಸಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ಸ್ವಾಗತಿಸಿ, ಕಾರ್ಯದರ್ಶಿ ತಾರಾ ಮಾಧವ ಚೂಂತಾರು ವಂದಿಸಿದರು.










