ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ ‘ಸುಸ್ನಿಲ ‘2026 ಅಂಗವಾಗಿ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಗೆ ಆರೋಗ್ಯದ ಮಾಹಿತಿ ಕಾರ್ಯಾಗಾರನಡೆಯಿತು.ಜೇಸಿಐ ಸುಳ್ಯ ಪಯಸ್ವಿನಿಯ ಮಾಜಿ ಅಧ್ಯಕ್ಷ ರಂಜಿತ್ ಕುಕ್ಕೆಟ್ಟಿ ಉದ್ಘಾಟಿಸಿದರು.
ಘಟಕಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಸಭಾಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕು
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಮುಖ್ಯ ಅತಿಥಿ ಯಾಗಿದ್ದರು.
ಸಪ್ತಾಹ ನಿರ್ದೇಶಕ ವಿನೋದ್ ಮೂಡಗದ್ದೆ ಸಪ್ತಾಹ ವರದಿ ಮಂಡಿಸಿದರು.
ಗುರುಪ್ರಸಾದ್ ನಾಯಕ್ ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿದರು.
ಸ್ನಿಗ್ಧ ಮೋಂಟಡ್ಕ ಜೇಸಿ ವಾಣಿ ವಾಚಿಸಿದರು. ಕಾರ್ಯಕ್ರಮ ಸಂಯೋಜಕಿ ಶೋಭ ಅಶೋಕ್ ತರಬೇತಿದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ತಾರಾ ಚೂಂತಾರು ವಂದಿಸಿದರು. .
ಕಾರ್ಯಕ್ರಮದಲ್ಲಿ ಮಾಜಿ ವಲಯಾಧ್ಯಕ್ಷ ಅಶೋಕ್ ಚೂಂತಾರು, ನಿಲಯ ಮೇಲ್ವಿಚಾರಕಿ ಹೇಮಲತಾ, ನಿಲಯದ ಸಿಬ್ಬಂದಿ ವರ್ಗದವರು, ಜೇಸಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










