ಮೇನಾಲ: ಅಜ್ಜಾವರ ಗ್ರಾಮದ ಮೇನಾಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು. ಶಾಲೆಗೆ ವಿಷ್ಣು ಯುವಕ ಮಂಡಲದ ವತಿಯಿಂದ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ವಿಷ್ಣು ಯುವಕ ಮಂಡಲದ
ಅಧ್ಯಕ್ಷ ರಂಜಿತ್ ರೈ ಮೇನಾಲ, ಉಪಾಧ್ಯಕ್ಷ ಉಮೇಶ್ ಇರಂತಮಜಲು ಹಾಗೂ ಪದಾಧಿಕಾರಿಗಳು ಸಿಹಿ ತಿಂಡಿ ವಿತರಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ರಶ್ಮಿತಾ ಕರ್ಕೇರಾ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಕನಕ ಟೀಚರ್, ಎಸ್ಡಿಎಂಸಿ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.