ಪಂಜ:ಪಂಜಶ್ರೀ ಶಾರದಾಂಬ ಭಜನಾ ಮಂದಿರದ ಅಭಿವೃದ್ಧಿ ಹಾಗೂ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರು ಬಿಡುಗಡೆಗೊಳಿಸಿ ಪ್ರಥಮ
ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಡಾ. ದೇವಿಪ್ರಸಾದ್ ಕಾನತ್ತೂರ್ ಅವರನ್ನು ಶ್ರೀ ಶಾರದಾಂಬ ಭಜನಾ ಮಂಡಳಿಯ ವತಿಯಿಂದ ಗೌರವಿಸಲಾಯಿತು.ವೇದಿಕೆಯಲ್ಲಿ

ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ, ನಿವೇಶನ ಖರೀದಿ ಸಂಚಾಲಕ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಜೊತೆ ಕಾರ್ಯದರ್ಶಿ ರಾಜಕುಮಾರ್ ಬೇರ್ಯ ಸದಸ್ಯರಾದ ಕುಶಾಲಪ್ಪ ನೆಲ್ಲಿಕಟ್ಟೆ, ಶಿವಪ್ಪ ಸಂಕಡ್ಕ, ಜಿನ್ನಪ್ಪ ಗೌಡ ಗುಂಡಡ್ಕ, ವೀಣಾ ನಾರಾಯಣ ಪಂಜ
ಉಪಸ್ಥಿಧರಿದ್ದರು.ಸಭೆಯಲ್ಲಿ ಶಾರದಂಬಾ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಹಾಜರಿದ್ದರು.





