ಗ್ಲಾಸ್ಗೊ: ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 60 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಭಾರತದ ರಿಷಿಕಾಂತ್ ಸಿಂಗ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.ಕ್ಲೀನ್ ಅಂಡ್ ಜರ್ಕ್’ ವಿಭಾಗದ ಎರಡು ಪ್ರಯತ್ನಗಳು ವಿಫಲವಾದದ್ದು ಭಾರತದ
ರಿಷಿಕಾಂತ್ ಸಿಂಗ್ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಅಂತಿಮವಾಗಿ 264 ಕೆ.ಜಿ.ಯೊಂದಿಗೆ(121 ಕೆ.ಜಿ+ 143 ಕೆ.ಜಿ) ಬೆಳ್ಳಿ ಪದಕ ಗೆಲ್ಲುವಲ್ಲಿ ಮಣಿಪುರದ ವೇಟ್ಲಿಫ್ಟರ್ ಯಶಸ್ವಿಯಾದರು.
ಒಟ್ಟು ಪ್ರಯತ್ನಗಳಲ್ಲಿ 273 ಕೆ.ಜಿ. ಎತ್ತುವ ಮೂಲಕ ಮಲೇಷ್ಯಾದ ಮೊಹಮದ್ ಅನಿಕ್ ಕಸ್ದನ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೀನ್ಯಾದ ಅಮುಂಗಾ ಎಂಬೊಯಾ ಕಂಚಿನ ಪದಕ ಗೆದ್ದರು.








