ಗ್ಲಾಸ್ಗೊ:ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 48 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 31 ವರ್ಷದ ಮೀರಾಬಾಯಿ ಚಾನು ಅವರು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದು ಗ್ಲಾಸ್ಗೊ ಕ್ರೀಡಾಕೂಟದಲ್ಲಿ
ಭಾರತದ ಮೊದಲ ಚಿನ್ನದ ಪದಕವಾಗಿದೆ.ಸ್ನ್ಯಾಚ್’ ವಿಭಾಗದಲ್ಲಿ 85 ಕೆ.ಜಿ ಮತ್ತು ‘ಕ್ಲೀನ್ ಅಂಡ್ ಜರ್ಕ್’ ವಿಭಾಗದಲ್ಲಿ 105 ಕೆ.ಜಿ ಸೇರಿದಂತೆ ಒಟ್ಟು 190 ಕೆ.ಜಿ ಅವರ ಅತ್ಯುತ್ತಮ ಸಾಧನೆಯಾಗಿತ್ತು.ಒಟ್ಟು 190 ಕೆ.ಜಿ ತೂಕವನ್ನು ಎತ್ತುವ ಮೂಲಕ ತಮ್ಮ ಪ್ರಾಬಲ್ಯ ಮೆರೆದರು. ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ ಅವರು ಒಟ್ಟು 168 ಕೆ.ಜಿ ಎತ್ತಿದರು.ಕ್ಲೀನ್ ಅಂಡ್ ಜರ್ಕ್’ ವಿಭಾಗದಲ್ಲಿ 105 ಕೆ.ಜಿ ಎತ್ತುವ ಮೂಲಕ ಮೀರಾಬಾಯಿ ಚಾನು ಅವರು ಕಾಮನ್ವೆಲ್ತ್ ಗೇಮ್ಸ್ ದಾಖಲೆಯನ್ನು ಮುರಿದರು.ಪುರುಷರ 60 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ರಿಷಿಕಾಂತ್ ಸಿಂಗ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.








