ಸುಳ್ಯ:ಸುಳ್ಯದ ಕಾರಣಿಕ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಕಲಶೋತ್ಸವ ಜೂ.15ರಿಂದ ಆರಂಭಗೊಂಡಿದ್ದು 18ರ ತನಕ ನಡೆಯಲಿದೆ. ಇದರ ಅಂಗವಾಗಿ ಜೂ.15ರಂದು ಬೆಳಿಗ್ಗಿನಿಂದ ಆರಂಭಗೊಂಡ ದಶಮ ಸ್ಕಂದ ಪಾರಾಯಣ ಸಮಾಪನಗೊಂಡಿತು. ನಾರಾಯಣ ಮೂರ್ತಿ ಕಾಂಞಂಗಾಡ್ ಮತ್ತು

ಬಾಲಕೃಷ್ಣ ನಂಬೂದಿರಿ ಅವರ ನೇತೃತ್ವದಲ್ಲಿ ನಡೆದ ದಶಮ ಸ್ಕಂದ ಪಾರಾಯಣ ಜೂನ್ 16 ರಂದು ಸಮಾಪನಗೊಂಡಿತು. ಇಂದು ಬೆಳಿಗ್ಗೆ 7ರಿಂದ ಗಣಪತಿ ಹೋಮದಿಂದ ವೈದಿಕ ಕಾರ್ಯಕ್ರಮಗಳು ಆರಂಭಗೊಂಡು ತಿಲಹೋಮ, ಪವಮಾನ ಹೋಮ, ಚಕ್ರಾಬ್ಜಪೂಜೆ ನಡೆಯಿತು. ತದನಂತರ ಭಾಗವತದಶಮ ಸ್ಕಂದ ಪಾರಾಯಣ ಮುಂದುವರಿಯಿತು. ಭಾಗವತ ದಶಮ ಸ್ಕಂದ ಪಾರಾಯಣದ ಮಹತ್ವವನ್ನು ವಿವರಿಸಲಾಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್, ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್, ಧರ್ಮದರ್ಶಿಗಳು, ಸಮಿತಿ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.








