ಸುಳ್ಯ:ಸುಳ್ಯ ಮಂಡಲದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 134ನೇ ಮನ್ ಕೀ ಬಾತ್ ವೀಕ್ಷಣೆ ಮತ್ತು ಕಾರ್ಯಕರ್ತರ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಮುರುಳ್ಯದ ನಿವಾಸದಲ್ಲಿ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸತೀಶ್ ಕುಂಪಲ ಸುಳ್ಯ ಮಂಡಲ ಕಳೆದ ಅವೃತಿಯ
ಮನ್ ಕೀ ಬಾತ್ ಕಾರ್ಯಕ್ರಮ ಶೇ.100 ವೀಕ್ಷಣೆ ಮಾಡಿ ನಂ 1ಸ್ಥಾನವನ್ನು ಪಡೆದುಕೊಂಡಿತು. ಈ ಬಾರಿಯೂ ಅದೇ ಫಲಿತಾಂಶ ಬರಲಿ ಮತ್ತು ಜೂನ್ 5ರಿಂದ ಆರಂಭವಾಗುವ ಎಸ್ಐಆರ್ ಬಗ್ಗೆಯೂ ವಿಶೇಷ ಗಮನ ಹರಿಸಿ ಮತದಾರರಿಗೆ ಯಾವುದೇ ತೊಂದರೆಗಳು ಆಗದ ರೀತಿಯಲ್ಲಿ ಬಿಎಲ್ಎ 2ಗಳು ಮತ್ತು ಕಾರ್ಯಕರ್ತರು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ ಅರ್ವಾರ್,ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ,ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಮಹಿಳಾ ಮೊರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ,ಒಬಿಸಿ ಮೊರ್ಚಾ ಅಧ್ಯಕ್ಷ ಗಿರೀಶ ಪೈಲಾಜೆ, ಯುವಮೊರ್ಚಾ ಅಧ್ಯಕ್ಷ ಶ್ರಿಕಾಂತ್ ಮಾವಿನಕಟ್ಟೆ, ಮಂಡಲ ಕೋಶಾಧಿಕಾರಿ ಶುಭೋದ್ ಶೆಟ್ಟಿ ಮೇನಾಲ, ಮಂಡಲದ ಪ್ರಮುಖರಾದ ಎ.ವಿ ತೀರ್ಥರಾಮ,ವೆಂಕಟ್ ದಂಬೆಕೋಡಿ,ಹರೀಶ ಕಂಜಿಪಿಲಿ,ಎಸ್.ಎನ್. ಮನ್ಮಥ,ಕೇಶವ ಭಟ್ ಮುಳಿಯ,ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಮಹಿಳಾ ಪ್ರಮುಖರಾದ ಶುಭದ ರೈ,ಸುರ್ವಣಿನಿ ಪಂಜ,ಪುಷ್ಪಾವತಿ ಕಳುವಾಜೆ, ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.














