ಅಹಮ್ಮದಾಬಾದ್: ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಉಳಿಸಿಕೊಳ್ಳಲು ಆರ್ಸಿಬಿ ಸಜ್ಜಾಗಿದ್ದರೆ, ತವರು ಮೈದಾನದಲ್ಲೇ ಮತ್ತೊಮ್ಮೆ
ಕಪ್ ಎತ್ತಲು ಜಿಟಿ ಸಜ್ಜಾಗಿದೆ.ಆರ್ಸಿಬಿ ಬ್ಯಾಟಿಂಗ್ ಬಲಕ್ಕೆ ಜಿಟಿ ಬೌಲಿಂಗ್ ಪಡೆಯ ಸವಾಲು ಪಂದ್ಯದ ಹೈಲೈಟ್ಸ್.ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿ ಫೈನಲ್ ತಲುಪಿರುವ ಆರ್ಸಿಬಿ ತಂಡವು ಭರ್ಜರಿ ಫಾರ್ಮ್ನಲ್ಲಿದೆ. ನಾಯಕ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಬಲ ತಂಡದ ಪ್ರಮುಖ ಆಸ್ತ್ರವಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಕಾಗಿಸೊ ರಬಾಡ, ಮಹಮ್ಮದ್ ಸಿರಾಜ್, ರಶೀದ್ ಖಾನ್ ಬೌಲಿಂಗ್ ಪಡೆ ಆರ್ಸಿಬಿಗೆ ಸವಾಲಾಗಲಿದೆ.
ಗುಜರಾತ್ ಟೈಟಾನ್ಸ್ ತಂಡ ನಾಯಕ ಶುಭ್ಮನ್ ಗಿಲ್, ಯುವ ಓಪನರ್ ಸಾಯಿ ಸುದರ್ಶನ್ ಜೋಡಿಯ ಮೇಲೆ ಭರವಸೆಯಿಟ್ಟಿದೆ. ಆರ್ಸಿಬಿ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಾಶ್ ಹೇಜಲ್ವುಡ್ ಜಿಟಿಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.ಮಧ್ಯಮ ಕ್ರಮಾಂಕದ ಅಸ್ಥಿರತೆಯೇ ಜಿಟಿ ಮೈನಸ್ ಪಾಯಿಂಟ್ ಗುಜರಾತ್ ತಂಡವು ತನ್ನ ಟಾಪ್-3 ಆಟಗಾರರ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಕ್ವಾಲಿಫೈಯರ್-1 ರಲ್ಲಿ ಆರ್ಸಿಬಿ ಬೌಲರ್ಗಳು ಆರಂಭಿಕ ವಿಕೆಟ್ ಕೀಳುವ ಮೂಲಕ ಜಿಟಿಯನ್ನು ಕೇವಲ 162 ರನ್ಗಳಿಗೆ ಕಟ್ಟಿಹಾಕಿದ್ದರು. ಪಂದ್ಯ ರಾತ್ರಿ 7.30ರಿಂದ ಆರಂಭವಾಗಲಿದೆ.














