ಸುಳ್ಯ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಬೀದಿ ನಾಟಕದ ಎರಡನೇ ಹಂತದ ಪ್ರದರ್ಶನ ನಾಳೆಯಿಂದ (ಅ.24ರಿಂದ) ಆರಂಭಗೊಳ್ಳಲಿದೆ.ಸುಳ್ಯ ತಾಲೂಕಿನ
ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
‘ವಿಶ್ವ ನಾಯಕ ನರೇಂದ್ರ ಮೋದಿ’ ಎಂಬ ಬೀದಿ ನಾಟಕ ಪ್ರಥಮ ಹಂತದಲ್ಲಿ ಕಡಬ ತಾಲೂಕಿನ 21 ಕಡೆಗಳಲ್ಲಿ ಪ್ರದರ್ಶನ ಕಂಡಿದೆ.ಅ.24 ರಂದು ಜಾಲ್ಸೂರು ಮಹಾಶಕ್ತಿ ಕೇಂದ್ರದ ಆಲೆಟ್ಟಿ, ಅಜ್ಜಾವರ,ಮಂಡೆಕೋಲು, ಜಾಲ್ಸೂರು ಕನಕಮಜಲು, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಐವರ್ನಾಡು ಮತ್ತು ಬೆಳ್ಳಾರೆಯಲ್ಲಿ ನಡೆಯಲಿದೆ. 25ನೇ ತಾರೀಕಿನಂದು ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಪಂಜ, ನಿಂತಿಕಲ್ಲು, ಬಾಳಿಲ, ಕಳಂಜ, ಕೊಡಿಯಾಲ, ಪೆರುವಾಜೆ, ಕಲ್ಮಡ್ಕ, ಕುಕ್ಕುಜಡ್ಕದಲ್ಲಿ ನಡೆಯಲಿದೆ. ಅ.26ರಂದು ಗುತ್ತಿಗಾರು ಮಹಾಶಕ್ತಿ ಕೇಂದ್ರದ

ಕೊಲ್ಲಮೊಗ್ರ, ಹರಿಹರ,ಗುತ್ತಿಗಾರು, ಮಡಪ್ಪಾಡಿ,ಮಾವಿನಕಟ್ಟೆ, ಎಲಿಮಲೆ, ಮರ್ಕಜಗಳಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಅ.27ರಂದು ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಲ್ಲುಗುಂಡಿ, ಅರಂತೋಡು, ಉಬರಡ್ಕ ಮಿತ್ತೂರು, ಸುಳ್ಯನಗರ ಮಹಾಶಕ್ತಿ ಕೇಂದ್ರದ ದುಗಲಡ್ಕ, ಗಾಂಧಿನಗರ, ದಲ್ಲಿ ನಡೆದು ಸಂಜೆ 5ಕ್ಕೆ ಜಯನಗರದ ಮಿಲಿಟರಿ ಗ್ರೌಂಡ್ನಲ್ಲಿ ನಡೆಯುವ ಪ್ರದರ್ಶನದೊಂದಿಗೆ ಸಮಾರೋಪಗೊಳ್ಳಲಿದೆ.
ಈ ಬೀದಿ ನಾಟಕದ ರಚನೆ, ನಿರ್ದೆಶನವನ್ನು ಕುಸುಮಾಧರ ಎ.ಟಿ.ಮಾಡಿದ್ದಾರೆ. ಕುಸುಮಾಧರ ಎ.ಟಿ ಅವರು ರಚಿಸಿದ ಹಾಡುಗಳನ್ನು

ರಾಜ್ ಮುಖೇಶ್ ಸುಳ್ಯ ಸಂಯೋಜನೆ ಮಾಡಿದ್ದಾರೆ. ಮೋದಿ ಅವರ ಬದುಕು ಮತ್ತು ಸಾಧನೆಯನ್ನು ಹಾಡು ಮತ್ತು ಸಂಭಾಷಣೆಯ ಮೂಲಕ ಪ್ರಸ್ತುತಪಡಿಸಲಾಗಿದೆ.ನಾಟಕದಲ್ಲಿ ಕುಸುಮಾಧರ ಎ.ಟಿ., ರಾಜ್ ಮುಖೇಶ್ ಸುಳ್ಯ, ಪುಷ್ಪರಾಜ್, ನಾರಾಯಣ ಎಸ್.ಎಂ., ಕೇಶವ ಮಾಸ್ಟರ್, ಚಿದಾನಂದ ವಿದ್ಯಾನಗರ, ಚಿನ್ಮಯಿ,ದುಷ್ಯಂತ್ ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಮೋದಿ ಅವರ ನಾಯಕತ್ವ, ವಿಕಸಿತ ಭಾರತದ ಕನಸು ಮತ್ತು ಸೇವಾ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಬೀದಿ ನಾಟಕವನ್ನು ಆಯೋಜಿಸಲಾಗಿದೆ ಎಂದು ಸುಳ್ಯ ಮಂಡಲದ ಪ್ರಕಟಣೆ ತಿಳಿಸಿದೆ.









