ಸುಳ್ಯ:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಅವರ 25 ವರ್ಷಗಳ ಆಡಳಿತದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಬೀದಿ ನಾಟಕ ಪ್ರದರ್ಶನ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.’ವಿಶ್ವ ನಾಯಕ ನರೇಂದ್ರ ಮೋದಿ’ ಎಂಬ ಬೀದಿ ನಾಟಕವು ಮೂರುವರೆ ದಿನಗಳಲ್ಲಿ 21 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ
21ಪ್ರದರ್ಶನ ಕಂಡಿದೆ. ವಿವಿಧ ಕಡೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ನಾಟಕ ವೀಕ್ಷಿಸಿದರು. ಸುಮಾರು 27 ನಿಮಿಷಗಳ ಬೀದಿ ನಾಟಕದಲ್ಲಿ ಪ್ರಧಾನಿ ಮೋದಿ ಅವರ ರಾಜಕೀಯ ಜೀವನ, ಆಡಳಿತದ ಸಾಧನೆಗಳನ್ನು, ಆಡಳಿತದ ಅವಧಿಯ ದೇಶದ ಪ್ರಗತಿಯನ್ನು ತಿಳಿಸಲಾಯಿತು. ಹಾಡು ಹಾಗು ಸಂಭಾಷಣೆಯ ಮೂಲಕ ಇದನ್ನು ಮನ ಮುಟ್ಟುವಂತೆ ಪ್ರಸ್ತುತ ಪಡಿಸಲಾಯಿತು. ಸುಳ್ಯ ನಗರ
ಬಿಜೆಪಿ ಮಹಾಶಕ್ತಿ ಕೇಂದ್ರದ ಕುಸುಮಾಧರ ಎ.ಟಿ ಅವರು ‘ವಿಶ್ವ ನಾಯಕ ನರೇಂದ್ರ ಮೋದಿ’ ನಾಟಕವನ್ನು ರಚಿಸಿದ್ದಾರೆ. ಕುಸುಮಾಧರ ಎ.ಟಿ. ಮತ್ತು ರಾಜ್ ಮುಖೇಶ್ ಸುಳ್ಯ ಅವರು ನಾಟಕದ ನಿರ್ದೇಶನ ಮಾಡಿದ್ದಾರೆ. ಎ.ಟಿ.ಕುಸುಮಾಧರ ರಚಿಸಿದ ಹಾಡುಗಳ ಸಂಯೋಜನೆಯನ್ನು ರಾಜ್ ಮುಖೇಶ್ ಅವರು ಮಾಡಿದ್ದಾರೆ. ನಾಟಕದಲ್ಲಿ ಪಾತ್ರಧಾರಿಗಳಾಗಿ

ಕುಸುಮಾಧರ ಎ.ಟಿ.,ರಾಜ್ ಮುಖೇಶ್ ಸುಳ್ಯ, ಪುಷ್ಪರಾಜ್, ನಾರಾಯಣ ಎಸ್.ಎಂ., ಕೇಶವ ಮಾಸ್ಟರ್, ಚಿದಾನಂದ ವಿದ್ಯಾನಗರ, ಚಿನ್ಮಯಿ, ದುಷ್ಯಂತ್ ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರ ನೇತೃತ್ವದಲ್ಲಿ ಮಂಡಲ ಸಮಿತಿ ಬೀದಿ ನಾಟಕ ಪ್ರದರ್ಶನವನ್ನು ಆಯೋಜಿಸಿತ್ತು.ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಕಡಬ ಭಾಗದ ನಾಟಕ ಪ್ರದರ್ಶನದ ಉಸ್ತುವಾರಿ ವಹಿಸಿದ್ದರು. ಕಡಬ ತಾಲೂಕು ವ್ಯಾಪ್ತಿಯಲ್ಲಿ ನಾಟಕ ಪ್ರದರ್ಶನ ಪೂರ್ತಿಗೊಂಡಿದ್ದು ಮುಂದಿನ ವಾರದಲ್ಲಿ ಸುಳ್ಯ ತಾಲೂಕಿನ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ವಿವಿಧ ಕಡೆ ನಾಟಕ ಪ್ರದರ್ಶನ ನಡೆಯಲಿದೆ.
ಪ್ರಮುಖರಿಂದ ನಾಟಕ ವೀಕ್ಷಣೆ:
ಬೀದಿ ನಾಟಕ ಪ್ರದರ್ಶನವನ್ನು ಪ್ರಮುಖರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದ ಗುಂಡ್ಯದಲ್ಲಿ ಬೀದಿ ನಾಟಕ ಪ್ರದರ್ಶನದ ಉದ್ಘಾಟನೆ ನಡೆಯಿತು. ದಿನಕ್ಕೆ 6 ಪ್ರದರ್ಶನ ಎಂಬಂತೆ ಮೂರೂವರೆ ದಿನದಲ್ಲಿ

21 ಪ್ರದರ್ಶನ ಕಂಡಿದೆ.ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಎಸ್.ಅಂಗಾರ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್ ಮತ್ತಿತರರು ಸೇರಿ ಪಕ್ಷದ ಪ್ರಮುಖರು ನಾಟಕ ವೀಕ್ಷಿಸಿದರು.










