ಪಂಜ: ಪಂಜ ಸೀಮೆಯ ಮಾಯಿಲಕೋಟೆ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಸಭೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಪಳಂಗಾಯ,ಕಾರ್ಯಾಧ್ಯಕ್ಷ ಬಿಶ್ವಜೀತ್ ಪಳಂಗಾಯ,ಉಪಾಧ್ಯಕ್ಷ ಕುಮಾರ್ ಬಳ್ಳಕ್ಕ,ಸುದರ್ಶನ್ ಪಟ್ಟಾಜೆ,ತಮ್ಮಯ್ಯ ನಾಯ್ಕ ಪಟ್ಟಾಜೆ,ಕಾರ್ಯದರ್ಶಿ ಅಶ್ವಥ್ ಪಳಂಗಾಯ ಉಪಸ್ಥಿತರಿದ್ದರು ಸುದರ್ಶನ್ ಪಟ್ಟಾಜೆ ಸ್ವಾಗತಿಸಿ ವಂದಿಸಿದರು. ಜೂ.26 ರಂದು ದೈವಜ್ಞರಾದ ಪ್ರಸಾದ್ ಪಾಂಗಣ್ಣಾಯರ ನೇತೃತ್ವದಲ್ಲಿ ನಡೆಯುವ ಅನುಜ್ಞ ಕಲಶ ಹಾಗೂ ಸ್ಥಳ ಪ್ರಶ್ನಾ ಚಿಂತನೆಯ ಪೂರ್ವತಯಾರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.