ಮಡಿಕೇರಿ: ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಜಗದಗಲ ಖ್ಯಾತಿ ಗಳಿಸಿರುವ ರೋಟರಿ ಸಂಸ್ಥೆಯು ನಾಯಕತ್ವ ಗುಣ ಬೆಳೆಸಲು ನೆರವಾಗುವುದರೊಂದಿಗೆ ಸದಸ್ಯರಲ್ಲಿರುವ ಪ್ರತಿಭೆಯ ಅನಾವರಣಕ್ಕೂ ವೇದಿಕೆಯಾಗಿ ಸಮಾಜ ಸೇವೆಗೆ ಪ್ರೇರಪಣೆ ನೀಡುತ್ತದೆ ಎಂದು ಸುಳ್ಯ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಹಾಯಕ ಗವರ್ನರ್ ಡಾ. ಕೇಶವ ಪಿ.ಕೆ. ಹೇಳಿದ್ದಾರೆ,ಮಡಿಕೇರಿ ರೋಟರಿ ಸಭಾಂಗಣದಲ್ಲಿ
ರೋಟರಿ ಮಡಿಕೇರಿ ವುಡ್ಸ್ನ ನೂತನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಮತ್ತು ಕಾಯ೯ದಶಿ೯ಯಾಗಿ ಕಿರಣ್ ಕುಂದರ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ಸರಿಯಾದ ವೇದಿಕೆಗಳು ದೊರಕದೇ ಇದ್ದಾಗ ಅಸಾಮಾನ್ಯ ವ್ಯಕ್ತಿ ಕೂಡ ಸಾಮಾನ್ಯನಾಗಿಬಿಡುತ್ತಾನೆ, ರೋಟರಿಯಂಥ ನಾಯಕತ್ವ ಬೆಳೆಸುವ ಸಂಸ್ಥೆಗಳು ಅಸಮಾನ್ಯ ವ್ಯಕ್ತಿತ್ವದವರೊಂದಿಗೆ ಸಾಮಾನ್ಯನನ್ನೂ ಅಸಮಾನ್ಯ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ, ಹೀಗಾಗಿ ರೋಟರಿಯಂಥ ಸೇವಾ ಸಂಸ್ಥೆಗಳಲ್ಲಿ ಸೇಪ೯ಡೆಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು, ಜೀವನದಲ್ಲಿ ಒಂದು ಹಂತದವರೆಗೆ ಸಂಪತ್ತು, ಕೀತಿ೯ ಸಂಪಾದನೆ ಮಾಡಬೇಕು, ಆದರೆ ಇವೆಲ್ಲಾ ದೊರಕಿದ ಮೇಲೆಯೂ ಸಮಾಧಾನ ದೊರಕದೇ ಹೋದಾಗ ಸಾಮಾಜಿಕ ಸೇವೆಗೆ ಮುಂದಾದರೆ ಮಾತ್ರ ಮಾನಸಿಕ ನೆಮ್ಮದಿ ದೊರಕುತ್ತದೆ, ರೋಟರಿಯ ಸೇವಾ ಕಾಯ೯ಗಳು ಈ ಸಂಸ್ಥೆಯ ಸದಸ್ಯರಿಗೆ ಬೇರೆಲ್ಲೂ ದೊರಕದ ಮಾನಸಿಕ ಸಂತೋಷ ಮತ್ತು ನೆಮ್ಮದಿಯನ್ನು ದೊರಕಿಸಿಕೊಡುತ್ತದೆ ಎಂದೂ ಡಾ.ಕೇಶವ್ ಹೇಳಿದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ಕಿರಣ್,
ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿದರು.
ರೋಟರಿ ವುಡ್ಸ್ ನೂತನ ಅಧ್ಯಕ್ಷ ಹರೀಶ್ ಕಿಗ್ಗಾಲು, ಈ ವಷ೯ದಲ್ಲಿ ಅನೇಕ ವಿಭಿನ್ನ ಕಾಯ೯ಕ್ರಮಗಳ ಮೂಲಕ ಸಾಮಾಜಿಕ ಸೇವಾ ಕಾಯ೯ಗಳನ್ನು ನಿರಂತರವಾಗಿಸುವುದಾಗಿ ಭರವಸೆ ನೀಡಿದರು,
ಇದೇ ಸಂದಭ೯ ಜಾದೂಗಾರ ವಿಕ್ರಂಶೆಟ್ಟಿ ಮ್ಯಾಜಿಕ್ ಮೂಲಕ ಬುಟ್ಟಿಯೊಳಗಿನಂದ ರೋಟರಿ ವುಡ್ಸ್ ನ ವಾತಾ೯ ಸಂಚಿಕೆ ಅನಾವರಣಗೊಳಿಸಿ ಗಮನ ಸೆಳೆದರು,
ರೋಟರಿ ವುಡ್ಸ್ ವತಿಯಿಂದ ಮಡಿಕೇರಿಯ ಅಡುಗೆ ಅನಿಲ ಸಿಲಿಂಡರ್ ವಿತರಕರಾದ ಮಂಜುನಾಥ್, ಸುರೇಶ್, ಇಫಾ೯ನ್ ಎಂ, ಆರ್, ಉನೈಜ್, ವಜೀರ್, ಪೀಟರ್, ಇಮ್ರಾನ್ ಅವರುಗಳನ್ನು ಸನ್ಮಾನಿಸಲಾಯಿತು.
ರೋಟರಿ ವುಡ್ಸ್ ನಿಗ೯ಮಿತ ಅಧ್ಯಕ್ಷ ವಸಂತ್ ಕುಮಾರ್ ತನ್ನ ಅವಧಿಯ ಸೇವಾ ಕಾಯ೯ಗಳ ಮಾಹಿತಿ ನೀಡಿದರು, ರೋಟರಿ ವುಡ್ಸ್ ಕಾಯ೯ದಶಿ೯ ಕಿರಣ್ ಕುಂದರ್ ವಂದಿಸಿದ ಕಾಯ೯ಕ್ರಮದಲ್ಲಿ ರೋಟರಿ ವಲಯ 6 ರ ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಪಾಲ್ಗೊಂಡಿದ್ದರು