ಲಂಡನ್: ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಸೇರಿದಂತೆ 7 ಮಂದಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ಲಂಡನ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿ ಒಟ್ಟು ಏಳು ಮಂದಿಯನ್ನು
ಐಸಿಸಿ ‘2025ರ ಹಾಲ್ ಆಫ್ ಫೇಮ್’ಗೆ ಸೇರಿಸಿದೆ.ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರ ಟಿ–20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿತ್ತು. 2004ರಲ್ಲಿ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಧೋನಿ ಅವರು, 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್, 350 ಏಕದಿನ ಪಂದ್ಯಗಳಲ್ಲಿ 10,773 ರನ್(ಇದರಲ್ಲಿ 10 ಶತಕ, 73 ಅರ್ಧಶತಕ ಸೇರಿವೆ) ಮತ್ತು 98 ಟಿ-20 ಪಂದ್ಯಗಳ್ಲಿ 1,617 ರನ್ಗಳನ್ನು ಕಲೆಹಾಕಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ 824 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ನ ಅತ್ಯುನ್ನತ ಸಂಸ್ಥೆಯಾದ ಐಸಿಸಿ 2009ರಲ್ಲಿ ಹಾಲ್ ಆಫ್ ಫೇಮ್ ಅನ್ನು ಆರಂಭಿಸಿತು. ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಗಣ್ಯರನ್ನು ಈ ಕ್ಲಬ್ನಲ್ಲಿ ಸೇರಿಸಲಾಗುತ್ತದೆ. ಇಲ್ಲಿಯವರೆಗೆ 11 ಮಂದಿ ಭಾರತೀಯರು ಸೇರಿ ಒಟ್ಟು 115 ಕ್ರಿಕೆಟಿಗರನ್ನು ಹಾಲ್ ಆಫ್ ಫೇಮ್ಗೆ ಸೇರಿಸಲಾಗಿದೆ.ಮಹೇಂದ್ರ ಸಿಂಗ್ ಧೋನಿ,ಗ್ರೇಮ್ ಸ್ಮಿತ್ –ದಕ್ಷಿಣ ಆಫ್ರಿಕಾ
ಹಾಶಿಮ್ ಆಮ್ಲಾ–ದಕ್ಷಿಣ ಆಫ್ರಿಕಾ,ಮ್ಯಾಥ್ಯೂ ಹೇಡನ್–ಆಸ್ಟ್ರೇಲಿಯಾ,ಡೇನಿಯಲ್ ವೆಟ್ಟೋರಿ– ನ್ಯೂಜಿಲೆಂಡ್,ಸಾರಾ ಟೇಲರ್–ಇಂಗ್ಲೆಂಡ್,ಸನಾ ಮಿರ್ –ಪಾಕಿಸ್ತಾನ 2025ರ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದರು.