ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ನಾಲ್ಕನೇ ದಿನವಾದ ಅ.14ರಂದು ಭಜನೆ ಮತ್ತು ಕಲಾ ಸೇವೆ ನಡೆಯಿತು.ಶ್ರೀ ಸಿದ್ಧಿ ವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇವರಿಂದ
‘ಭಜನಾ ಸಂಕೀರ್ತನೆ’ ಸೇವೆ ನಡೆಯಿತು.ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಮತ್ತು ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯೆಯರಾದ ಸ್ತುತಿ ರೈ ಐಗಿರಿ, ಅಡ್ಡಬೈಲು ಮತ್ತು ಮನಸ್ವಿ.ಪಿ ರೈ,ಪಲ್ಲತ್ತಡ್ಕ ಹಾಗು ವಿದುಷಿ ಪ್ರಾಂಜಲಿ ಕಾನತ್ತೂರು ಇವರ ಶಿಷ್ಯೆ ಚರಿಷ್ಮ ರೈ ಪಲ್ಲೋಡಿ ಝೇಂಕಾರ ಕಲಾ ಪ್ರತಿಷ್ಠಾನ ಇವರಿಂದ ಭರತನಾಟ್ಯ ನಡೆಯಿತು.ರಾತ್ರಿ

ನವರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ
ಸದಸ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು.










