ಲಖನೌ:ನಾಯಕ ಶ್ರೇಯಸ್ ಅಯ್ಯರ್ ಸಿಡಿಸಿದ ಸ್ಪೋಟಕ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವುವಸಾಧಿಸಿದೆ.ಟಾಸ್ ಸೋತು ಮದಲು ಬ್ಯಾಟ್ ಮಾಡಿದ ವಿಂಡೀಸ್ 19.1 ಓವರ್ಗಳಲ್ಲಿ 171 ರನ್ಗೆ ಆಲ್ ಔಟ್ ಆಯಿತು. ಗುರಿಯನ್ನು ಬೆನ್ನತ್ತಿದ
ಟೀಮ್ ಇಂಡಿಯಾ 14.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಗೆಲುವಿನ ನಗೆ ಬೀರಿತು.ನಾಯಕ ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನೆಡೆಗೆ ಕೊಂಡೊಯ್ದರು. ಅಯ್ಯರ್ 43 ಎಸೆತಗಳಲ್ಲಿ 6 ಸಿಕ್ಸರ್, 10 ಬೌಂಡರಿ ನೆರವಿನದ ಅಜೇಯ 102 ರನ್ ಗಳಿಸಿದರು.ಆರಂಭಿಕರಾದ ಅಭಿಷೇಕ್ ಶರ್ಮಾ (21 ರನ್) ಮತ್ತು ಸಂಜು ಸ್ಯಾಮ್ಸನ್ (11) ಉತ್ತಮ ಓಪನಿಂಗ್ ಕೊಡುವಲ್ಲಿ ವಿಫಲರಾಗಿದ್ದೇ ಆದರೂ ನಂತರದಲ್ಲಿ ಕ್ರೀಸ್ಗೆ ಬಂದ ಇಶಾನ್ ಕಿಶನ್ (ಅಜೇಯ 37 ರನ್) ನಾಯಕನಿಗೆ ಉತ್ತಮ ಸಾಥ್ ನೀಡಿ ಪಂದ್ಯ ಗೆಲ್ಲಲು ನೆರವು ನೀಡಿದರು. 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ವಿಂಡೀಸ್ ಪರ ಶಾಯ್ ಹೋಪ್ (52, 37 ಎಸೆತ) ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್ ಇನ್ನಿಂಗ್ಸ್ ತೋರಿದರು.
ನಂತರದಲ್ಲಿ ಕ್ರೀಸ್ಗಿಳಿದ ಶಿಮ್ರಾನ್ ಹೆಟ್ಮಾಯರ್ (5), ಪೋವಲ್ (0), ಚೇಸ್ (5), ರೋಮಾರಿಯೋ ಶೆಫಾರ್ಡ್ (7), ಮ್ಯಾಥ್ಯೂವ್ ಫೋರ್ಡೆ (2), ಶಾಮರ್ ಸ್ಪ್ರಿಂಗರ್ (9) ಕೇವಲ ಒಂದಂಕಿ ರನ್ ಗಳಿಸಿ ಔಟಾದರು. ಏಕಾಂಗಿ ಹೋರಾಟ ನಡೆಸಿದ ಶರ್ಫೇನ್ ರುದರ್ಫೋರ್ಡ್ ಅವರ ಇನ್ನಿಂಗ್ಸ್ ತಂಡದ ಒಟ್ಟು ಮೊತ್ತವನ್ನು 150ರ ಗಡಿದಾಟಿಸಲು ಸಹಾಯ ಮಾಡಿತು.ರುದರ್ಫೋರ್ಡ್ 34 ಎಸೆತಗಳಲ್ಲಿ 56 ರನ್ ಚಚ್ಚಿದರು. ಭಾರತದ ಪರ ನಮನ್ ಧೀರ್ 3, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.







