ಸುಳ್ಯ:ಕೆ.ವಿ.ಜಿ ಕಾನೂನು ಕಾಲೇಜಿನ ಎನ್. ಎಸ್. ಎಸ್ ಘಟಕದ ವತಿಯಿಂದ ಒಂದು ದಿನದ ವಿಶೇಷ ಶಿಬಿರ ದ.ಕ.ಜಿ.ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ಸುಳ್ಯದ ನಡೆಯಿತು. ಶಾಲೆಯ ವಠಾರದಲ್ಲಿ
ಎನ್. ಎಸ್. ಎಸ್ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು. ಶಾಲೆಗೆ ತರಕಾರಿ ಕೈ ತೋಟವನ್ನು ನಿರ್ಮಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ ಬಿ, ದ.ಕ.ಜಿ.ಪ.ಹಿ. ಪ್ರಾಥಮಿಕ ಶಾಲೆ ಸುಳ್ಯ ಇದರ ಮುಖ್ಯೋಪಾಧ್ಯಾಯಿನಿ ಸುನಂದ ರೈ,ಎನ್. ಎಸ್. ಎಸ್ ಘಟಕದ ಕಾರ್ಯಕ್ರಮಧಿಕಾರಿಗಳಾದ ಕಲಾವತಿ ಎಂ,ರಂಜನ್ ಕೆ.ಎನ್ ಮತ್ತು ಕಾಲೇಜಿನ ಉಪನ್ಯಾಸಕಿ ಅರ್ಚನಾ ಆರ್ ರೈ ಉಪಸ್ಠಿತರಿದ್ದರು. ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕರು ಪಾಲ್ಗೊಂಡಿದ್ದರು.