ಸುಳ್ಯ:ಮುಅಲ್ಲಿಂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜಟ್ಟಿಪಳ್ಳ ಬುಸ್ತಾ ನುಲ್ ಉಲೂo ಮದ್ರಸದಲ್ಲಿ ಸದರ್ ಉಸ್ತಾದ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅವರನ್ನು ಸನ್ಮಾನಿಸಲಾಯಿತು.
ಸಮಸ್ತ 100 ನೇ ವಾರ್ಷಿಕ ಸೆಂಟಿನರಿ ಸೆಲೆಬ್ರೇಷನ್ ಮುಅಲ್ಲಿಮ್ ಅವಾರ್ಡ್ ಅಂಗವಾಗಿ
ಸುನ್ನೀ ಜಂ ಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಘಟಕ ದಿಂದ ಮುಅಲ್ಲಿಮ್ ಅವಾರ್ಡ್ ರಾಜ್ಯ ಪ್ರಶಸ್ತಿ ಗೆ ಭಾಜನರಾಗಿದ್ದು ಇತ್ತೀಚೆಗೆ ರಾಜ್ಯ ಎಸ್ ಜೆ ಎಂ ರಾಜ್ಯ ಸಮ್ಮೇಳನ ದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿನ್ನಲೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಜಟ್ಟಿಪ್ಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಬಿ. ಎಂ. ಮಹಮ್ಮದ್, ಅನ್ಸಾರ್ ಉಪಾಧ್ಯಕ್ಷ ಕೆ. ಬಿ. ಇಬ್ರಾಹಿಂ, ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಹಮೀದ್ ಬೀಜಕೊಚ್ಚಿ, ಜಟ್ಟಿಪ್ಪಳ್ಳ ಮಾಜಿ ಅಧ್ಯಕ್ಷರಾದ ಮಹಮ್ಮದ್ ಹಾಜಿ, ಅಬೂಬಕ್ಕರ್ ಮೇಸ್ತ್ರಿ, ಎನ್. ಎ. ಅಬ್ದುಲ್ಲ, ಶರೀಫ್ ಜಟ್ಟಿಪ್ಪಳ್ಳ, ಸಹಾಯಕ ಸದರ್ ಉಸ್ತಾದ್ ಸಿರಾಜುದ್ದೀನ್ ಅಲೆಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.















