ಸುಳ್ಯ: ಗ್ರಾಮೀಣ ಕ್ರೀಡೆಯಾದ ಲಗೋರಿಯನ್ನು ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾಕ್ಕೆ ಸೇರ್ಪಡೆ ಮಾಡುವುದು ಆ ಮೂಲಕ ಲಗೋರಿ ಸ್ಕೂಲ್ ಗೇಮ್ಸ್ಗೆ ಸೇರಿಸುವ ಪ್ರಯತ್ನದ ಭಾಗವಾಗಿ ಲಗೋರಿ ಆಟವನ್ನು ವೀಕ್ಷಿಸಲು ಮತ್ತು ಲಗೋರಿ ಆಟದ ನಿಯಮಗಳನ್ನು ಪರಿಶೀಲಿಸಲು ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾದ ನಿರ್ದೆಶಕರಾದ ಅರವಿಂದ್ ಕುಮಾರ್ ಮಾ.31ರಂದು ಸುಳ್ಯಕ್ಕೆ ಆಗಮಿಸಿದರು. ಈ ಹಿನ್ನಲೆಯಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ
ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಲಗೋರಿ ಪ್ರದರ್ಶನ ಪಂದ್ಯಾಟವನ್ನು ಅವರು ವೀಕ್ಷಿಸಿದರು. ಲಗೋರಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಲಗೋರಿ ಪಂದ್ಯದ ನಿಯಮಗಳನ್ನು ವಿವರಿಸಿದರು. ಪೆರಾಜೆ, ಕಲ್ಮಡ್ಕ, ರೋಟರಿ ಪ್ರೌಢ ಶಾಲೆಯ ಎರಡು ತಂಡಗಳು ಒಟ್ಟು ನಾಲ್ಕು ತಂಡಗಳು ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದವು.
ಸ್ಕೂಲ್ ಗೇಮ್ಸ್ಗೆ ಸೇರಿಸಲು ಪ್ರಯತ್ನ:
ಪ್ರದರ್ಶನ ಪಂದ್ಯಾಟವನ್ನು ಅರವಿಂದ್ ಕುಮಾರ್ ಉದ್ಘಾಟಿಸಿದರು. ಗ್ರಾಮೀಣ ಕ್ರೀಡೆಯಾದ ಲಗೋರಿಯನ್ನು ಸ್ಕೂಲ್ ಗೇಮ್ ಫೆಡರೇಷನ್ಗೆ ಸೇರಿಸುವ ಎಲ್ಲಾ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು. ಲಗೋರಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು.ಲಗೋರಿ ಫೆಡರೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ನರಸಿಂಹಲು, ಉಪಾಧ್ಯಕ್ಷ ಶ್ರೀಕಾಂತ್, ಕೋಶಾಧಿಕಾರಿ ರವಿ ಕೆ.ಟಿ, ಜೊತೆ ಕಾರ್ಯದರ್ಶಿ ಶ್ರೀಸೂರ್ಯ, ರಾಷ್ಟ್ರೀಯ ಲಗೋರಿ ಪಂದ್ಯಾಟದ ಸಂಘಟನಾ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ,
ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಅಧ್ಯಕ್ಷ ಮಾಧವ ಬಿ.ಕೆ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ಎ.ವಿ.ತೀರ್ಥರಾಮ, ಪಿ.ಬಿ.ಸುಧಾಕರ ರೈ, ಶಿವರಾಮ ಏನೆಕಲ್ಲು, ದಿನೇಶ್ ಮಡಪ್ಪಾಡಿ, ಕೆ.ಗೋಕುಲ್ದಾಸ್, ಕೆ.ಟಿ.ವಿಶ್ವನಾಥ, ರಾಜು ಪಂಡಿತ್, ಎಂ. ಬಾಲಚಂದ್ರ ಗೌಡ, ಶೈಲೇಶ್ ಅಂಬೆಕಲ್ಲು, ಭವಾನಿಶಂಕರ ಕಲ್ಮಡ್ಕ, ರಜತ್ ಅಡ್ಕಾರ್, ಹರಿಪ್ರಕಾಶ್ ಅಡ್ಕಾರ್, ಶರತ್ ಅಡ್ಕಾರ್,ಬಾಲಗೋಪಾಲ ಸೇರ್ಕಜೆ, ಶಶಿಧರ ಎಂ.ಜೆ, ನಂದರಾಜ ಸಂಕೇಶ, ಕಿರಣ್ ನೀರ್ಪಾಡಿ, ಚಂದ್ರಶೇಖರ ನಂಜೆ, ತೇಜಸ್ವಿ ಕಡಪಳ, ಪ್ರವೀಣ್ ಕುಮಾರ್ ಜಯನಗರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಿಸೂರ್ಯ ವಂದಿಸಿದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.