ಸುಳ್ಯ:ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ 34ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ದೀಪ ಪ್ರಜ್ವಲನಗೊಳಿಸಿ ಮಾತನಾಡಿ ಕಾನೂನು ವಿದ್ಯಾಭ್ಯಾಸದಲ್ಲಿ ಪರಿವರ್ತನೆಯಾಗುತ್ತಿದೆ ಕಾಲ ಕಾಲಕ್ಕೆ ಬದಲಾಗುವ
ಕಾನೂನಿನಲ್ಲಿ ಸತತ ಅಧ್ಯಯನ ಶೀಲರಾಗಬೇಕು ಎಂದರು. ಪೆರಾಜೆ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ ‘ಶಿಕ್ಷಣ ಬ್ರಹ್ಮ ಡಾ.ಕೆ.ವಿ.ಜಿ.ಯವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ. ಕೆ.ವಿ.ಜಿಯವರು ತಮ್ಮ ದೂರದೃಷ್ಠಿಯಿಂದ ಸ್ಥಾಪಿಸಿರುವ ಕೆ.ವಿ.ಜಿ ಕಾನೂನು ಕಾಲೇಜು ಅತ್ಯುತ್ತಮವಾಗಿ ಮುನ್ನಡೆಯುತ್ತಿದೆ. ಕಾನೂನು ವಿದ್ಯಾರ್ಥಿಗಳು ಸಂವಿಧಾನದ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಬೇಕು.ವಿದ್ಯಾರ್ಥಿಗಳು ಕಾನೂನು ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಸದಾ ಓದು, ಚರ್ಚೆ, ಮಾತುಗಾರಿಕೆ ಅಣಕು ನ್ಯಾಯಾಲಯ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.ಸ್ಪರ್ಧೆ, ಸಂಘರ್ಷ ವೈಯಕ್ತಿಕ ಹಿತಾಸಕ್ತಿಗಳು ಹೆಚ್ಚುತ್ತಿರುವ ಈಗಿನ ಯುಗದಲ್ಲಿ ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ ಆಡಳಿತ ಮಂಡಳಿಯ ಸಲಹೆಗಾರರು, ನಿವೃತ್ತ ಪ್ರಾಂಶುಪಾಲರಾದ ಪ್ರೋ. ಕೆ.ವಿ. ದಾಮೋದರ ಗೌಡ ಅವರು ಮಾತನಾಡಿ ಕಠಿಣ ಪರಿಶ್ರಮ, ಸತತ ಅಧ್ಯಯನ ಮೂಲಕ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ.ಬಿ, ವಿಧ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್.ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಹೆಚ್. ಆರ್. ಪದಾಧಿಕಾರಿಗಳಾದ ಕಾರ್ತಿಕ್ ಪಿ.ಡಿ, ವೃಂದ ಪ್ರಕಾಶ್ ಉಪಸ್ಧಿತರಿದ್ದರು. ವಿಶ್ವವಿದ್ಯಾಲಯ, ರಾಜ್ಯಮಟ್ಟದ ಸ್ಪರ್ಧೆಗಳ ವಿಜೇತರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ವಿದ್ಯಾರ್ಥಿನಿ ರಮ್ಯ. ಕೆ.ಎಂ ಪ್ರಾರ್ಥಿಸಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್.ಎಸ್. ಸ್ವಾಗತಿಸಿದರು. ಪ್ರಾಂಶುಪಾಲರಾದ ಉದಯಕೃಷ್ಣ. ಬಿ ವಾರ್ಷಿಕ ವರದಿ ವಾಚಿಸಿದರು, ಉಪನ್ಯಾಸಕಿ ರಶ್ಮಿ. ಹೆಚ್, ಉಪನ್ಯಾಸಕಿ ಬೇಬಿ ವಿದ್ಯಾ. ಪಿ.ಬಿ. ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕಿ ನಯನ. ಪಿ. ಯು. ಶೈಕ್ಷಣಿಕ ಸಾಧಕರು, ದತ್ತಿನಿಧಿ ಪ್ರಶಸ್ತಿ ವಿಜೇತರ ಬಹುಮಾನ ವಾಚಿಸಿದರು. ಉಪನ್ಯಾಸಕಿ ರಚನ. ಕೆ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಸ್ವರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಕ್ರೀಡಾ ಸ್ವರ್ಧೆಗಳ ವಿಜೇತರ ಪಟ್ಟಿಯನ್ನು ಉಪನ್ಯಾಸಕ ಲಕ್ಷ್ಮೀಕಾಂತ್. ಕೆ.ಎಲ್. ವಾಚಿಸಿದರು. ಉಪನ್ಯಾಸಕಿ ಕಲಾವತಿ. ಎಂ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಸಚಿನ್. ಹೆಚ್. ಆರ್. ಧನ್ಯವಾದ ಸಲ್ಲಿಸಿದರು. ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.