ಸುಳ್ಯ: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ದಿ.ಅಬ್ದುಲ್ ಸತ್ತಾರ್ ಗೋರಡ್ಕ ಮತ್ತು ದಿ.ವೆಂಕಟ್ ಮೋಂಟಡ್ಕ ಸ್ಮರಣಾರ್ಥ ನಡೆಸಿದ ತಾಲೂಕು ಮಟ್ಟದ ಪಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಸುಳ್ಯದ ಕನ್ನಡ ಭವನದಲ್ಲಿ ನಡದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ
ಬಹುಮಾನ ವಿತರಿಸಲಾಯಿತು.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಸುಳ್ಯ ಕೊಡಿಯಾಲಬೈಲು ಮಹಾತ್ಮಗಾಂಧಿ ಪ್ರೌಢಶಾಲಾ ವಿದ್ಯಾರ್ಥಿನಿ ರಿಶಿತಾ ಪಿ.ಬಿ. ಪ್ರಥಮ, ಸುಳ್ಯ ರೋಟರಿ ಪ್ರೌಢ ಶಾಲಾ ವಿದ್ಯಾರ್ಥಿನಿ ಫಾತಿಮತ್ ಶೈಮಾ ಎಸ್.ಎಂ. ದ್ವಿತೀಯ, ಸುಳ್ಯ ಸ್ನೇಹ ಶಾಲೆಯ ವೈಶಾಲಿ ಹಾಗೂ ಎಣ್ಮೂರು ಸರಕಾರಿ ಪ್ರೌಢಶಾಲೆಯ ಸಾಕ್ಷಿ ಕೆ. ತೃತೀಯ ಬಹುಮಾನ ಪಡೆದರು.
ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಆಯೋಜಿಸಲಾದ ಭಾಷಣ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಪ.ಪೂ.ಕಾಲೇಜಿನ ಆಕಾಶ್ ಪ್ರಥಮ, ಬೆಳ್ಳಾರೆ ಕೆಪಿಎಸ್ ನ ಭವಿತಾ ದ್ವಿತೀಯ, ಅರಂತೋಡು ಎನ್.ಎಂ. ಪಿಯು ಕಾಲೇಜಿನ ಖುಷಿ ತೃತೀಯ ಬಹುಮಾನ ಪಡೆದುಕೊಂಡರು. ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳು ವಿಜೇತರಿಗೆ ನಗದು, ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು.