ಬೆಳ್ಳಾರೆ: ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಚೈತ್ರ ಕೆ ಇವರು ಇತ್ತೀಚೆಗೆ ನಡೆದ ಉಪನ್ಯಾಸಕ ಹುದ್ದೆಗೆ ಯುಜಿಸಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆ ಕೆಸೆಟ್ ಉತ್ತೀರ್ಣಗೊಂಡಿರುತ್ತಾರೆ. ಬೆಳ್ಳಾರೆ ಕಾವಿನಮೂಲೆಯ ರಾಜರಾಮ.ಕೆ ಮತ್ತು ಪ್ರವೀಣ ಸರಸ್ವತಿಯವರ ಪುತ್ರಿ. ಇವರು ಪ್ರಸ್ತುತ ದ್ವಿತೀಯ ಎಂಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.