ಸುಳ್ಯ:ಕಳೆದ ಐದು ವರ್ಷಗಳಿಂದ ಸುಳ್ಯದ ಜನತೆಗೆ ಗುಣಮಟ್ಟದ ಕಣ್ಣಿನ ಆರೈಕೆ ಹಾಗೂ ಅತ್ಯುತ್ತಮ ಕನ್ನಡಕಗಳ ಸೇವೆಯನ್ನು ಒದಗಿಸುತ್ತಿರುವ ‘ಕಿರಣ ಆಪ್ಟಿಕಲ್ಸ್’ ಇದೀಗ ಯಶಸ್ವಿ ಐದನೇ ವರ್ಷದ ಸಂಭ್ರಮದಲ್ಲಿದೆ. ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ, ಪ್ರಭು ಬುಕ್ ಸ್ಟಾಲ್ ಎದುರಿನ ಕೆ.ಆರ್. ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿರುವ ಈ ಸಂಸ್ಥೆಯು ತನ್ನ
ಅತ್ಯುತ್ತಮ ಗ್ರಾಹಕ ಸೇವೆಯಿಂದ ಜನಮನ್ನಣೆ ಗಳಿಸಿದೆ.
ನುರಿತ ಆಪ್ಟೋಮೆಟ್ರಿಸ್ಟ್ನಿಂದ ಸೇವೆ:
2021ರಲ್ಲಿ ಪ್ರಾರಂಭವಾದ ಈ ಸಂಸ್ಥೆಯನ್ನು ದಂಪತಿಗಳಾದ ಶ್ರೀಮತಿ ಅಖಿಲಾ ಕೆ. ಹಾಗೂ ಶ್ರೀ ಶಶಿಕಿರಣ್ ಆನೆಕಾರ್ ಅವರು ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ಇಲ್ಲಿ ಅಖಿಲಾ ಅವರೇ ನುರಿತ ‘ಆಪ್ಟೋಮೆಟ್ರಿಸ್ಟ್’ (Optometrist) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ರಂಗದಲ್ಲಿ ಅಪಾರ ಅನುಭವ ಹೊಂದಿರುವ ಇವರು, 2013-15ರ ಅವಧಿಯಲ್ಲಿ ಹುಬ್ಬಳ್ಳಿಯ ಪ್ರಖ್ಯಾತ ‘ಎಂ.ಎಂ. ಜೋಷಿ ಕಣ್ಣಿನ ಆಸ್ಪತ್ರೆ’ಯಲ್ಲಿ ವೃತ್ತಿ ನಿರ್ವಹಿಸಿದ್ದರು. ತದನಂತರ 2015 ರಿಂದ 2021ರ ವರೆಗೆ ಸುಳ್ಯದ ‘ಪ್ರಸಾದ್ ನೇತ್ರಾಲಯ’ದಲ್ಲಿ ಆಪ್ಟೋಮೆಟ್ರಿಸ್ಟ್ ಆಗಿ ಸೇವೆ

ಸಲ್ಲಿಸಿದ ಸುದೀರ್ಘ ಅನುಭವ ಇವರದ್ದಾಗಿದೆ. ತಮ್ಮ ಈ ಅಪಾರ ಅನುಭವದ ಆಧಾರದ ಮೇಲೆ, ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ತಮ್ಮದೇ ಸ್ವಂತ ಸಂಸ್ಥೆಯಾದ ‘ಕಿರಣ ಆಪ್ಟಿಕಲ್ಸ್’ ಅನ್ನು ಹುಟ್ಟುಹಾಕಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಸಂಪೂರ್ಣ ಉಚಿತ ಕಣ್ಣಿನ ಪರೀಕ್ಷೆ:
‘ಕಿರಣ ಆಪ್ಟಿಕಲ್ಸ್’ನಲ್ಲಿ ಆಧುನಿಕ ಯಂತ್ರೋಪಕರಣಗಳ ಮೂಲಕ ಸಂಪೂರ್ಣ ಉಚಿತವಾಗಿ ಕಂಪ್ಯೂಟರೀಕೃತ ನೇತ್ರ ಪರೀಕ್ಷೆ ಮಾಡಲಾಗುತ್ತದೆ. ಕೇವಲ ಕಣ್ಣಿನ ತಪಾಸಣೆ ಮಾತ್ರವಲ್ಲದೆ, ಎಲ್ಲಾ ವಯಸ್ಸಿನವರಿಗೂ ಒಪ್ಪುವಂತಹ ಅತ್ಯಾಧುನಿಕ ವಿನ್ಯಾಸದ ಕನ್ನಡಕಗಳು (Spectacles), ಸನ್ಗ್ಲಾಸ್ಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್ಗಳು ಇಲ್ಲಿ ಲಭ್ಯವಿದ್ದು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ತ್ವರಿತಗತಿಯ ಸೇವೆ – ಗುಣಮಟ್ಟವೇ ನಮ್ಮ ಧ್ಯೇಯ:
“ತ್ವರಿತಗತಿಯ ಸೇವೆ ಹಾಗೂ ರಾಜಿಯಾಗದ ಗುಣಮಟ್ಟವೇ ನಮ್ಮ ಸಂಸ್ಥೆಯ ವಿಶೇಷತೆ” ಗ್ರಾಹಕರಿಗೆ ಅನುಕೂಲಕರ ದರದಲ್ಲಿ, ವಿಶೇಷ ರಿಯಾಯಿತಿಯೊಂದಿಗೆ ಗುಣಮಟ್ಟದ ಕನ್ನಡಕಗಳನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎನ್ನುತ್ತಾರೆ ಮಾಲೀಕರಾದ ಶಶಿ ಕಿರಣ್ ಆನೆಕಾರ್ ಹಾಗು ಅಖಿಲಾ ಕೆ.

ವಿಳಾಸ ಮತ್ತು ಸಂಪರ್ಕ:
ಕಿರಣ ಆಪ್ಟಿಕಲ್ಸ್
1ನೇ ಮಹಡಿ, ಕೆ.ಆರ್. ಕಾಂಪ್ಲೆಕ್ಸ್,
ಹಳೆ ಬಸ್ ನಿಲ್ದಾಣದ ಹತ್ತಿರ, ಪ್ರಭು ಬುಕ್ ಸ್ಟಾಲ್ ಎದುರು,
ಮುಖ್ಯ ರಸ್ತೆ, ಸುಳ್ಯ.
ಸಂಪರ್ಕ ಸಂಖ್ಯೆ: 7899368737, 9480647005









