ಪುತ್ತೂರು:ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ 88ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಚಂದ್ರ ಕೋಲ್ಟಾರ್ ಅಧ್ಯಕ್ಷತೆಯಲ್ಲಿ ಪುತ್ತೂರಿನ ಪ್ರಧಾನ ಕಛೇರಿಯ ಮಾಧುರಿ ಸೌಧ ಸಭಾಂಗಣದಲ್ಲಿ ಜರಗಿತು.ವಾರ್ಷಿಕ ವ್ಯವಹಾರು
3.19 ಕೋಟಿ ಆಗಿದ್ದು, 1.09 ಲಕ್ಷ ಕೆ.ಜಿ ಜೇನು ಮಾರಾಟ ಮಾಡಲಾಗಿದ್ದು, ರೂ.1.17 ಕೋಟಿ ವ್ಯಾಪಾರ ಲಾಭಗಳಿಸಲಾಗಿದೆ. ರೂ.20.92 ಲಕ್ಷ ನಿವ್ವಳ ಲಾಭ ಬಂದಿದ್ದು, ಒಟ್ಟು ವಾರ್ಷಿಕ ವ್ಯವಹಾರ ರೂ.37.83 ಕೋಟಿ ಆಗಿರುತ್ತದೆ. ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರುಗಳಿಗೆ ಶೇಕಡಾ 22 ಡಿವಿಡೆಂಟ್ ಘೋಷಿಸಲಾಗಿದ್ದು, ಜೇನು ವ್ಯವಯಸಾಯಗಾರರಿಗೆ ಕೆ.ಜಿ 1 ರಂತೆ ರೂ.11 ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಣೆ ಮಾಡಿದರು. ಸಂಘಕ್ಕೆ ಅತಿ ಹೆಚ್ಚು ಜೇನು ನೀಡಿದ 10 ಜನ ಜೇನು ವ್ಯವಸಾಯಗಾರರಿಗೆ ಹಾಗೂ ಅತೀ ಹೆಚ್ಚು ಜೇನು ಖರೀದಿಸಿ ಮಾರಾಟ ಮಾಡಿದ ಮಾರಾಟಗಾರನ್ನು ಗೌರವಿಸಲಾಯಿತು.
ಮುಂದಿನ ಆರ್ಥಿಕ ವರ್ಷದಲ್ಲಿ ಜೇನಿನ ಪ್ರದರ್ಶನ ಹಾಗೂ ಮಾರಾಟ ಮಾಡಲು ಲಘು ವಾಹನ ಖರೀದಿಸಲಾಗುವುದು. ಇದರೊಂದಿಗೆ ಜೇನು ಚಾಕೋಲೇಟ್ನ ಮಾರಾಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಮಹಾಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಹಿರಿಯ ವಿಜ್ಞಾನಿಗಳಾದ ಡಾ. ಟಿ.ಜೆ ರಮೇಶ್ ಹಾಗೂ ಡಾ. ಮಲ್ಲಿಕಾರ್ಜುನ ಎಲ್. ಇವರು ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಧ್ಯಕ್ಷರಾದ ಚಂದ್ರ ಕೋಲ್ಟಾರ್, ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ, ನಿರ್ದೇಶಕರುಗಳಾದ ಜಿ.ಪಿ ಶ್ಯಾಮ ಭಟ್, ಜನಾರ್ಧನ ಚೂಂತಾರು, ಡಿ. ತನಿಯಪ್ಪ, ಶ್ರೀಶ ಕೊಡವೂರು, ಶ್ರೀಮತಿ ಇಂದಿರಾ ಕೆ. ಶ್ರೀ ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ. ಶಿವಾನಂದ, ಮನಮೋಹನ ಎ. ಪುಟ್ಟಣ್ಣ ಗೌಡ ಕೆ, ಶಂಕರ್ ಪೆರಾಜೆ, ಸರಸ್ವತಿ ವೈ ಪಿ, ಸುಶೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಜಯಾನಂದ ಜಿ ಉಪಸ್ಥಿತರಿದ್ದರು.








