ಸುಳ್ಯ:ಲಯನ್ಸ್ ಕ್ಲಬ್ ಸದಸ್ಯರಾದ ಕೇರ್ಪಳದ ಕೆ.ಸಿ.ಕರುಂಬಯ್ಯ, ರೀಟಾ ಕರುಂಬಯ್ಯ ದಂಪತಿಗಳಿಂದ ಲಯನ್ಸ್ ಕ್ಲಬ್ ಮೂಲಕ ಶಿಕ್ಷಣಕ್ಕೆ ದೇಣಿಗೆ ಹಸ್ತಾಂತರಿಸಲಾಯಿತು.1.65 ಲಕ್ಷ ರೂಗಳ ಚೆಕ್ಕನ್ನು ಕೆ.ಸಿ.ಕರುಂಬಯ್ಯ ಮತ್ತು ರೀಟಾ ಕರುಂಬಯ್ಯ ಅವರು
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಲಸ್ರಾದೋ ಅವರಿಗೆ ಹಸ್ತಾಂತರ ಮಾಡಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಈ ಹಣವನ್ನು ನೀಡಲಾಗುವುದು ಎಂದು ವಿನೋದ್ ಲಸ್ರಾದೋ ತಿಳಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕರುಂಬಯ್ಯ ಅವರು ದೇಣಿಗೆ ನೀಡುತ್ತಿದ್ದಾರೆ.





