ಸುಳ್ಯ:ಸುಳ್ಯದ ‘ಶ್ರೀ ಇನ್ಫೋ’ ಕಂಪ್ಯೂಟರ್ಸ್ನ ಸಹ ಸಂಸ್ಥೆ ನೂತನ ಎಕ್ಸ್ಕ್ಲೂಸಿವ್ ಲ್ಯಾಪ್ಟಾಪ್ ಶೋರೂಮ್ ‘ಶ್ರೀ ಇನ್ಫೋ’ ಲ್ಯಾಪ್ಟಾಪ್ ಸೆಂಟರ್’ ಜುಲೈ 16 ಗುರುವಾರ ಶುಭಾರಂಭಗೊಳ್ಳಲಿದೆ. ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್ನ ಪ್ರಥಮ ಮಹಡಿಯಲ್ಲಿ ಕಾರ್ಯಾರಂಭ ಮಾಡಲಿರುವ ಶ್ರೀ ಇನ್ಪೋ ಲ್ಯಾಪ್ಟಾಪ್ ಸೆಂಟರ್ ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸೇವೆಗಾಗಿ ಇರುವ ಸುಳ್ಯದ
ಎಕ್ಸ್ಕ್ಲೂಸಿವ್ ಶೋರೂಮ್ ಆಗಿರಲಿದೆ. ಜುಲೈ 16ರಂದು ಪೂ.10ಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ನೆಟ್ಕಾಂ, ಸೌಪರ್ಣಿಕಾ ಆರ್ಕೇಡ್ನ ಮಾಲಕ ನಾರಾಯಣ ಮಣಿಯಾಣಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಳೆದ 16 ವರ್ಷಗಳಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಾಣೀಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಇನ್ಫೋ ಕಂಪ್ಯೂಟರ್ಸ್ ಕಂಪ್ಯೂಟರ್, ಲ್ಯಾಪ್ಟಾಪ್ ಸೇಲ್ಸ್ ಮತ್ತು ಸರ್ವೀಸ್ ಕ್ಷೆತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ. ಶ್ರೀ ಇನ್ಫೋ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ

ದೃಷ್ಟಿಯಿಂದ ಎಲ್ಲಾ ರೀತಿಯ ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸರ್ವೀಸ್ಗಾಗಿ ನೂತನ ಲ್ಯಾಪ್ಟಾಪ್ ಶೋರೂಮ್ ಆರಂಭಿಸಲಾಗುತಿದೆ. ಇಲ್ಲಿ ಎಲ್ಲಾ ಕಂಪೆನಿಗಳ ವಿವಿಧ ಶ್ರೇಣಿಯ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಲಭ್ಯವಿದೆ.
ಆಕರ್ಷಕ ಆಫರ್:
ಉದ್ಘಾಟನೆಯ ಪ್ರಯುಕ್ತ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಆಕರ್ಷಕ ಆಫರ್ಗಳು ಲಭ್ಯವಿದೆ. ಎಲ್ಲಾ ಬ್ರಾಂಡ್ಗಳ ಆಕರ್ಷಕ ಲ್ಯಾಪ್ಟಾಪ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.ಉದ್ಘಾಟನೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಲ್ಯಾಪ್ ಟಾಪ್ ಖರೀದಿಗೆಂದು ಭರ್ಜರಿ ಆಫರ್ ಘೋಷಿಸಿದೆ.ಅಂದರೆ ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ದರ ಸಿಕ್ಕಾಪಟ್ಟೆ ಏರಿಕೆ ಕಂಡಿದೆ.ಹೆಚ್ಚು ಕಮ್ಮಿ ದರ ಎರಡು ಪಟ್ಟು ಏರಿಕೆಯಾಗಿರುವುದು ಗೊತ್ತೇ ಇದೆ. ಇಂತಹಾ ಸಂದರ್ಭದಲ್ಲಿ ನೂತನ ಲ್ಯಾಪ್ಟಾಪ್ ಖರೀದಿಸುವ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಹಳೆಯ ದರದಲ್ಲಿಯೇ ನೂತನ ಲ್ಯಾಪ್ಟಾಪ್ ಖರೀದಿಸುವ

ಸುವರ್ಣಾವಕಾಶವನ್ನೂ ನೀಡಲಾಗಿದೆ.ಸೀಮಿತ ಸ್ಟಾಕ್ ಮಾತ್ರ ಲಭ್ಯವಿದ್ದು ಸೀಮಿತ ಅವಧಿಗೆ ಈ ಆಫರ್ ನೀಡಲಾಗುವುದು.
ಹೊಸ ದರದಲ್ಲಿಯೂ ಅತ್ಯಧುನಿಕ ವಿನ್ಯಾಸದ ಆಕರ್ಷಕ ಲ್ಯಾಪ್ಟಾಪ್ಗಳು ಲಭ್ಯವಿದೆ.ಅಲ್ಲದೆ ಪ್ರತಿ ಲ್ಯಾಪ್ಟಾಪ್ ಖರೀದಿಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ.ಅಲ್ಲದೆ ಪ್ರತಿ ವಾರ ಡ್ರಾ ನಡಸಿ ಅದೃಷ್ಟ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.ಲ್ಯಾಪ್ಟಾಪ್ ಖರೀದಿಗೆ ಆಕರ್ಷಕ ಆಫರ್ಗಳನ್ನು ನೀಡಲಾಗುವುದು.ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದೆ. ಲ್ಯಾಪ್ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು

ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್ಟಾಪ್ಗಳ ಸ್ಟಾಕ್ಗಳು ಲಭ್ಯವಿದೆ.ಆಫಲ್ ಮ್ಯಾಕ್ಬುಕ್, ಏಸರ್, ಡೆಲ್,ಆಸಸ್, ಲೆನೊವೊ, ಮತ್ತಿತರ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಇದೆ. ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಐಫೋನ್, ನತ್ತಿಂಗ್, ಸ್ಯಾಮ್ಸಂಗ್, ನೋಕಿಯಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳು ಕೂಡ ಲಭ್ಯವಿದೆ. ತಮ್ಮ ಇಷ್ಟದ ಲ್ಯಾಪ್ಟಾಪ್ಗಳ ಬುಕ್ಕಿಂಗ್ ಮಾಡಲು ಅವಕಾಶ ಇದೆ. ಎಂದು ಶ್ರೀ ಇನ್ಫೋ ಕಂಪ್ಯೂಟರ್ ಸೆಂಟರ್ನ ಮಾಲಕರಾದ ಸತೀಶ್ ಕಾಟೂರು ಹಾಗು ಶ್ರೀವತ್ಸ ಕಾಟೂರು ತಿಳಿಸಿದ್ದಾರೆ.
ಲ್ಯಾಪ್ಟಾಪ್ ಬುಕ್ಕಿಂಗ್ ಹಾಗು ಇತರ ಮಾಹಿತಿಗಾಗಿ ಸಂಪರ್ಕಿಸಿ:
ಸತೀಶ್ ಕಾಟೂರು
08257-359321
9743746985, 9886107232,






