ಬೆಂಗಳೂರು:ವಿಧಾನ ಸೌಧದಲ್ಲಿ ನಡೆದ ಕೆಎಫ್ಡಿ ಸಭೆಯಲ್ಲಿ ಭಾಗವಹಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಯ ಕೊರತೆಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸಭೆಯ ಇತರ ಶಾಸಕರು ಕೂಡ ಧ್ವನಿಗೂಡಿಸಿ 24×7 ಸೇವೆಯನ್ನು ನೀಡುವಂತೆ
ಸಚಿವರನ್ನು ಒತ್ತಾಸಿದರು. ಸಭೆಯ ನಂತರ ಸುಳ್ಯ ವಿಧಾನ ಸಭಾ ಕ್ಷೇತ್ರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಯಂತ್ರಗಳು ಮತ್ತು ರಕ್ತ ನಿಧಿ ಕೇಂದ್ರ ಹಾಗೂ ಮೂಲಭೂತ ಸೌಕರ್ಯಗಳಿಗೆ ಅನುದಾನ ಬಿಡುಗೊಳಿಸುವಂತೆ ಶಾಸಕರು ಮನವಿ ಸಲ್ಲಿಸಿದರು.
ಸುಳ್ಯ ವಿಧಾನ ಕ್ಷೇತ್ರದಲ್ಲಿ ಎರಡು ಸರಕಾರಿ ಸಮುದಾಯ ಆರೋಗ್ಯ ಕೇಂದ್ರಗಳಿದ್ದು ಪ್ರಸ್ತುತ ಕೇಂದ್ರಗಳಲ್ಲಿ ಡಯಾಲಿಸಿಸ್ ರೋಗಿಗಳು ಹೆಚ್ಚಾಗಿ ಚಿಕಿತ್ಸೆಗಾಗಿ ಬರುತ್ತಿದ್ದು ಸದ್ಯ ಇರುವ ಯಂತ್ರಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ರೋಗಿಗಳು ದೂರದ ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ ಜೊತೆಗೆ ಬ್ಲೆಡ್ ಬ್ಯಾಂಕ್ ಗಳ ಕೊರತೆಯಿದ್ದು ಖಾಸಗಿ ಆಸ್ಪತ್ರೆಗಳಿಂದ ರಕ್ತ ಪಡೆದುಕೊಳ್ಳವಂತಹ ಅನಿವಾರ್ಯತೆ ಇದೆ ಮತ್ತು ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯು ಕೂಡ ಇರುತ್ತದೆ ಹಾಗಾಗಿ ತಮ್ಮ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಎರಡು ಆರೋಗ್ಯ ಕೇಂದ್ರಗಳಿಗೆ ಅನುದಾನವನ್ನು ಬಿಡುಗಡೆ ಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕರ ಕಚೇರಿ ತಿಳಿಸಿದೆ.








